ಪದಗುಚ್ಛ ಪುಸ್ತಕ

kn ಪರಿಚಯಿಸಿ ಕೊಳ್ಳುವುದು   »   es Conociendo otras personas

೩ [ಮೂರು]

ಪರಿಚಯಿಸಿ ಕೊಳ್ಳುವುದು

ಪರಿಚಯಿಸಿ ಕೊಳ್ಳುವುದು

3 [tres]

Conociendo otras personas

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸ್ಪ್ಯಾನಿಷ್ ಪ್ಲೇ ಮಾಡಿ ಇನ್ನಷ್ಟು
ನಮಸ್ಕಾರ. ¡H---! ¡Hola!
ನಮಸ್ಕಾರ. ¡B----- d---! ¡Buenos días!
ಹೇಗಿದ್ದೀರಿ? ¿Q-- t--? ¿Qué tal?
ಯುರೋಪ್ ನಿಂದ ಬಂದಿರುವಿರಾ? ¿V---- (u----) d- E-----? ¿Viene (usted) de Europa?
ಅಮೇರಿಕದಿಂದ ಬಂದಿರುವಿರಾ? ¿V---- (u----) d- A------? ¿Viene (usted) de América?
ಏಶೀಯದಿಂದ ಬಂದಿರುವಿರಾ? ¿V---- (u----) d- A---? ¿Viene (usted) de Asia?
ಯಾವ ಹೋಟೆಲ್ ನಲ್ಲಿ ಇದ್ದೀರಿ? ¿E- q-- / c--- (a-.) h---- s- e-------- h-------- / --- (u----)? ¿En qué / cuál (am.) hotel se encuentra hospedado / -da (usted)?
ಯಾವಾಗಿನಿಂದ ಇಲ್ಲಿದೀರಿ? ¿P-- c----- t----- h- e----- (u----) a---? ¿Por cuánto tiempo ha estado (usted) aquí?
ಏಷ್ಟು ಸಮಯ ಇಲ್ಲಿ ಇರುತ್ತೀರಿ? ¿P-- c----- t----- p---------- (u----) a---? ¿Por cuánto tiempo permanecerá (usted) aquí?
ನಿಮಗೆ ಈ ಪ್ರದೇಶ ಇಷ್ಟವಾಯಿತೆ? ¿L- g---- a---? ¿Le gusta aquí?
ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ? ¿E--- u---- a--- d- v---------? ¿Está usted aquí de vacaciones?
ನನ್ನನ್ನು ಒಮ್ಮೆ ಭೇಟಿ ಮಾಡಿ. ¡V------- c----- q-----! ¡Visíteme cuando quiera!
ಇದು ನನ್ನ ವಿಳಾಸ. Aq-- e--- m- d--------. Aquí está mi dirección.
ನಾಳೆ ನಾವು ಭೇಟಿ ಮಾಡೋಣವೆ? ¿N-- v---- m-----? ¿Nos vemos mañana?
ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ. Lo s------ p--- y- t---- o---- p-----. Lo siento, pero ya tengo otros planes.
ಹೋಗಿ ಬರುತ್ತೇನೆ. ¡A----- / ¡C---! ¡Adiós! / ¡Chao!
ಮತ್ತೆ ಕಾಣುವ. ¡A----- / ¡H---- l- v----! ¡Adiós! / ¡Hasta la vista!
ಇಷ್ಟರಲ್ಲೇ ಭೇಟಿ ಮಾಡೋಣ. ¡H---- p-----! ¡Hasta pronto!

ಅಕ್ಷರಮಾಲೆ.

ಭಾಷೆಗಳ ಮೂಲಕ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಏನನ್ನು ಯೋಚಿಸುತ್ತೇವೆ ಅಥವಾ ಅನುಭವಿಸುತ್ತೇವೆ ಎಂಬುದನ್ನು ಬೇರೆಯವರಿಗೆ ಹೇಳುತ್ತೇವೆ. ಬರವಣಿಗೆಯ ಕರ್ತವ್ಯ ಕೂಡ ಇದೇನೆ. ಹೆಚ್ಚಿನ ಭಾಷೆಗಳು ಒಂದು ಲಿಪಿಯನ್ನು ಹೊಂದಿರುತ್ತವೆ. ಲಿಪಿಗಳು ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿನ್ಹೆಗಳು ಬೇರೆ ಬೇರೆ ತರಹ ಕಾಣಿಸಬಹುದು. ಬಹಳಷ್ಟು ಲಿಪಿಗಳು ಅಕ್ಷರಗಳನ್ನು ಹೊಂದಿರುತ್ತವೆ. ಈ ಲಿಪಿಗಳನ್ನು ಅಕ್ಷರಮಾಲೆ ಎಂದು ಕರೆಯುತ್ತಾರೆ. ಅಕ್ಷರಮಾಲೆ ವಿಶಿಷ್ಟವಾಗಿ ಜೋಡಿಸಿದ ರೇಖಾಚಿತ್ರ ಚಿಹ್ನೆಗಳ ಸಮುದಾಯ . ಈ ಚಿಹ್ನೆಗಳನ್ನು ನಿರ್ದಿಷ್ಟ ಕ್ರಮಾನುಸಾರ ಪದಗಳಾಗಿ ಜೋಡಿಸುತ್ತಾರೆ. ಪ್ರತಿ ಚಿಹ್ನೆಗೂ ಒಂದು ನಿಖರವಾದ ಉಚ್ಚಾರಣೆ ಇರುತ್ತದೆ. ಅಲ್ಫಾಬೇಟ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಆಲ್ಫ ಮತ್ತು ಬೀಟ. ಭೂತಕಾಲದಲ್ಲಿ ವಿವಿಧವಾದ ಹೆಚ್ಚಿನ ಸಂಖ್ಯೆಯ ಅಕ್ಷರಗಳಿದ್ದವು. ಮೂರು ಸಾವಿರ ವರ್ಷಗಳಿಗೂ ಹಿಂದೆಯೆ ಲಿಪಿಚಿಹ್ನೆಗಳನ್ನು ಜನರು ಬಳಸುತ್ತಿದ್ದರು. ಮುಂಚೆ ಲಿಪಿ ಚಿಹ್ನೆಗಳು ಮಾಂತ್ರಿಕ ಚಿಹ್ನೆಗಳಾಗಿದ್ದವು. ಕೇವಲ ಕೆಲವೇ ಜನರಿಗೆ ಅವುಗಳ ಅರ್ಥ ತಿಳಿದಿತ್ತು. ನಂತರ ಈ ಚಿಹ್ನೆಗಳು ತಮ್ಮ ನಿಗೂಢ ಅರ್ಥಗಳನ್ನು ಕಳೆದುಕೊಂಡವು. ಅಕ್ಷರಗಳಿಗೆ ಈಗ ಯಾವುದೇ ಅಂತರಾರ್ಥವಿಲ್ಲ. ಕೇವಲ ಬೇರೆ ಅಕ್ಷರಗಳೊಡನೆ ಜೋಡಿಸಿದಾಗ ಅವುಗಳು ಅರ್ಥವನ್ನು ನೀಡುತ್ತವೆ. ಲಿಪಿಗಳು,ಉದಾಹರಣೆಗೆ ಚೀನಾ ಭಾಷೆಯಲ್ಲಿ, ಇವು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವು ಚಿತ್ರಗಳನ್ನು ಹೋಲುತ್ತವೆ, ಹಾಗೂ ಅದು ಏನನ್ನು ನಿರೂಪಿಸುತ್ತದೊ ಅದನ್ನೆ ಪ್ರತಿಪಾದಿಸುತ್ತದೆ. ನಾವು ಬರೆಯುವಾಗ ನಮ್ಮ ಆಲೋಚನೆಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುತ್ತೇವೆ. ನಮ್ಮ ತಿಳಿವಳಿಕೆಗಳನ್ನು ಚಿಹ್ನೆಗಳ ಮೂಲಕ ಸ್ಥಿರಪಡಿಸುತ್ತೇವೆ. ನಮ್ಮ ಮಿದುಳು ಅಕ್ಷರಗಳನ್ನು ವಿಸಂಕೇತಿಸಲು ಕಲಿತುಕೊಂಡಿದೆ. ಚಿಹ್ನೆಗಳು ಪದಗಳಾಗುತ್ತವೆ, ಪದಗಳು ವಿಚಾರಗಳಾಗುತ್ತವೆ. ಹಾಗಾಗಿ ಪಠ್ಯಗಳು ಸಾವಿರಾರು ವರ್ಷಉಳಿಯುತ್ತವೆ. ಮತ್ತು ಇನ್ನೂ ಅರ್ಥವಾಗುತ್ತಾ ಇರುತ್ತವೆ.