ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   et Asjaajamised

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

51 [viiskümmend üks]

Asjaajamised

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಎಸ್ಟೋನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. Ma t------- r-----------. Ma tahaksin raamatukokku. 0
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. Ma t------- r-----------. Ma tahaksin raamatupoodi. 0
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. Ma t------- k-----. Ma tahaksin kioski. 0
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. Ma t------- r------- l--------. Ma tahaksin raamatut laenutada. 0
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. Ma t------- r------- o---. Ma tahaksin raamatut osta. 0
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. Ma t------- a------- o---. Ma tahaksin ajalehte osta. 0
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ Ma t------- r----------- m----- e- r------- l--------. Ma tahaksin raamatukokku minna, et raamatut laenutada. 0
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. Ma t------- r----------- m----- e- r------- o---. Ma tahaksin raamatupoodi minna, et raamatut osta. 0
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. Ma t------- k----- m----- e- a------- o---. Ma tahaksin kioski minna, et ajalehte osta. 0
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. Ma t------- p----------. Ma tahaksin prillipoodi. 0
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. Ma t------- k----------. Ma tahaksin kauplusesse. 0
ನಾನು ಬೇಕರಿಗೆ ಹೋಗುತ್ತೇನೆ. Ma t------- p-----------. Ma tahaksin pagariärisse. 0
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. Ma t------- p----- o---. Ma tahaksin prille osta. 0
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. Ma t------- p------- j- k--------- o---. Ma tahaksin puuvilju ja köögivilju osta. 0
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. Ma t------- s------- j- l---- o---. Ma tahaksin saiakesi ja leiba osta. 0
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. Ma t------- p---------- m----- e- p----- o---. Ma tahaksin prillipoodi minna, et prille osta. 0
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. Ma t------- k---------- m----- e- o--- p------- j- k---------. Ma tahaksin kauplusesse minna, et osta puuvilju ja köögivilju. 0
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. Ma t------- p----------- m----- e- o--- s------- j- l----. Ma tahaksin pagariärisse minna, et osta saiakesi ja leiba. 0

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.