ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   nl Ontkenning 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [vijfenzestig]

Ontkenning 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಡಚ್ ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? Is d- r--- d---? Is de ring duur? 0
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. Ne-- h-- k--- m--- h------ e---. Nee, hij kost maar honderd euro. 0
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. Ma-- i- h-- e- m--- v------. Maar ik heb er maar vijftig. 0
ನಿನ್ನ ಕೆಲಸ ಮುಗಿಯಿತೆ? Be- j- a- k----? Ben je al klaar? 0
ಇಲ್ಲ, ಇನ್ನೂ ಇಲ್ಲ. Ne-- n-- n---. Nee, nog niet. 0
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. Ma-- i- b-- z- k----. Maar ik ben zo klaar. 0
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? Wi- j- n-- s---? Wil je nog soep? 0
ನನಗೆ ಇನ್ನು ಬೇಡ. Ne-- i- w-- e- g--- m---. Nee, ik wil er geen meer. 0
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. Ma-- n-- w-- e-- i----. Maar nog wel een ijsje. 0
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? Wo-- j- h--- a- l---? Woon je hier al lang? 0
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. Ne-- p-- e-- m----. Nee, pas een maand. 0
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. Ma-- i- k-- a- v--- m-----. Maar ik ken al veel mensen. 0
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? Ga j- m----- n--- h---? Ga je morgen naar huis? 0
ಇಲ್ಲ, ಕೇವಲ ವಾರಾಂತ್ಯದಲ್ಲಿ. Ne-- p-- i- h-- w------. Nee, pas in het weekend. 0
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. Ma-- i- k-- z----- a- t----. Maar ik kom zondag al terug. 0
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? Is j- d------ a- v--------? Is je dochter al volwassen? 0
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. Ne-- z- i- p-- z--------. Nee, ze is pas zeventien. 0
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. Ma-- z- h---- a- e-- v-----. Maar ze heeft al een vriend. 0

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.