ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   tr bir şey rica etmek

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [yetmiş dört]

bir şey rica etmek

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟರ್ಕಿಷ್ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? Sa------- k-------- m------? Saçlarımı kesebilir misiniz? 0
ಆದರೆ ತುಂಬ ಚಿಕ್ಕದಾಗಿ ಬೇಡ. Kı-- o------- l-----. Kısa olmasın, lütfen. 0
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. Bi--- d--- k---- l-----. Biraz daha kısa, lütfen. 0
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? Re------- b-------- m------? Resimleri basabilir misiniz? 0
ಚಿತ್ರಗಳು ಸಿ ಡಿಯಲ್ಲಿ ಇವೆ. Re------ C----. Resimler CD’de. 0
ಚಿತ್ರಗಳು ಕ್ಯಾಮರದಲ್ಲಿ ಇವೆ. Re------ k-------. Resimler kamerada. 0
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? Sa--- t---- e------- m------? Saati tamir edebilir misiniz? 0
ಗಾಜು ಒಡೆದು ಹೋಗಿದೆ. Ca- k-------. Cam kırılmış. 0
ಬ್ಯಾಟರಿ ಖಾಲಿಯಾಗಿದೆ. Pi- b-----. Pil bitmiş. 0
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? Gö----- ü----------- m------? Gömleği ütüleyebilir misiniz? 0
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? Pa------- t------------- m------? Pantolonu temizleyebilir misiniz? 0
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? Ay---------- t---- e------- m------? Ayakkabıları tamir edebilir misiniz? 0
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? Ba-- a--- v-------- m------? Bana ateş verebilir misiniz? 0
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? Ki---- v--- ç--------- v-- m-? Kibrit veya çakmağınız var mı? 0
ನಿಮ್ಮ ಬಳಿ ಆಷ್ ಟ್ರೇ ಇದೆಯೆ? Kü- t------- v-- m-? Kül tablanız var mı? 0
ನೀವು ಚುಟ್ಟಾ ಸೇದುತ್ತೀರಾ? Pu-- i----- m------? Puro içiyor musunuz? 0
ನೀವು ಸಿಗರೇಟ್ ಸೇದುತ್ತೀರಾ? Si---- i----- m------? Sigara içiyor musunuz? 0
ನೀವು ಪೈಪ್ ಸೇದುತ್ತೀರಾ? Pi-- i----- m------? Pipo içiyor musunuz? 0

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.