ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   cs Otázky – minulý čas 1

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

85 [osmdesát pět]

Otázky – minulý čas 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜೆಕ್ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? Ko--- j--- t--- v---- / v----- ? Kolik jste toho vypil / vypila ? 0
ನೀವು ಎಷ್ಟು ಕೆಲಸ ಮಾಡಿದಿರಿ? Ja- m-- j--- p------- / p--------? Jak moc jste pracoval / pracovala? 0
ನೀವು ಎಷ್ಟು ಬರೆದಿರಿ? Ko--- j--- t--- n----- / n------? Kolik jste toho napsal / napsala? 0
ನೀವು ಹೇಗೆ ನಿದ್ರೆ ಮಾಡಿದಿರಿ? Ja- j--- s--- / s----? Jak jste spal / spala? 0
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? Ja- j--- u----- / u------ z------? Jak jste udělal / udělala zkoušku? 0
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? Ja- j--- n---- / n---- c----? Jak jste našel / našla cestu? 0
ನೀವು ಯಾರೊಡನೆ ಮಾತನಾಡಿದಿರಿ? S k-- j--- m----- / m------? S kým jste mluvil / mluvila? 0
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? S k-- j--- d------- / d--------? S kým jste domluven / domluvena? 0
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? S k-- j--- s----- / s------ n---------? S kým jste slavil / slavila narozeniny? 0
ನೀವು ಎಲ್ಲಿ ಇದ್ದಿರಿ? Kd- j--- b-- / b---? Kde jste byl / byla? 0
ನೀವು ಎಲ್ಲಿ ವಾಸಿಸಿದಿರಿ? Kd- j--- b----- / b------? Kde jste bydlel / bydlela? 0
ನೀವು ಎಲ್ಲಿ ಕೆಲಸ ಮಾಡಿದಿರಿ? Kd- j--- p------- / p--------? Kde jste pracoval / pracovala? 0
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? Co j--- d-------- / d---------? Co jste doporučil / doporučila? 0
ನೀವು ಏನನ್ನು ತಿಂದಿರಿ? Co j--- j--- / j----? Co jste jedl / jedla? 0
ನೀವು ಏನನ್ನು ತಿಳಿದುಕೊಂಡಿರಿ? Co j--- s- d------- / d--------? Co jste se dozvěděl / dozvěděla? 0
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? Ja- r----- j--- j-- / j---? Jak rychle jste jel / jela? 0
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? Ja- d----- j--- l---- / l-----? Jak dlouho jste letěl / letěla? 0
ನೀವು ಎಷ್ಟು ಎತ್ತರ ನೆಗೆದಿರಿ? Ja- v----- j--- v------- / v--------? Jak vysoko jste vyskočil / vyskočila? 0

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.