ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   fi Sivulauseita että-sanalla 2

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [yhdeksänkymmentäkaksi]

Sivulauseita että-sanalla 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಿನ್ನಿಷ್ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. Mi--- ä-------- e--- s--- k-------. Minua ärsyttää, että sinä kuorsaat. 0
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. Mi--- ä-------- e--- j--- n--- p----- o-----. Minua ärsyttää, että juot niin paljon olutta. 0
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. Mi--- ä-------- e--- t---- n--- m------. Minua ärsyttää, että tulet niin myöhään. 0
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. Lu----- e--- h-- t-------- l-------. Luulen, että hän tarvitsee lääkärin. 0
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ Lu----- e--- h-- o- s-----. Luulen, että hän on sairas. 0
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ Lu----- e--- h-- n----- n--. Luulen, että hän nukkuu nyt. 0
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. To------- e--- h-- n-- t---------. Toivomme, että hän nai tyttäremme. 0
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. To------- e--- h------ o- p----- r----. Toivomme, että hänellä on paljon rahaa. 0
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. To------- e--- h-- o- m---------. Toivomme, että hän on miljonääri. 0
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. Ku----- e--- v------ j----- o-------------. Kuulin, että vaimosi joutui onnettomuuteen. 0
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. Ku----- e--- h-- m---- s----------. Kuulin, että hän makaa sairaalassa. 0
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. Ku----- e--- a----- o- k------- r----. Kuulin, että autosi on kokonaan rikki. 0
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Mi--- i---------- e--- t------. Minua ilahduttaa, että tulitte. 0
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Mi--- i---------- e--- t----- o- k-----------. Minua ilahduttaa, että teillä on kiinnostusta. 0
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. Mi--- i---------- e--- h------- o---- t----. Minua ilahduttaa, että haluatte ostaa talon. 0
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. Mi-- p------- e--- v-------- b---- m--- j-. Minä pelkään, että viimeinen bussi meni jo. 0
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. Mi-- p------- e--- j------- o------- t-----. Minä pelkään, että joudumme ottamaan taksin. 0
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. Mi-- p------- e---- m------ o-- r----. Minä pelkään, ettei minulla ole rahaa. 0

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...