ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   de Konjunktionen 1

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

94 [vierundneunzig]

Konjunktionen 1

ಪಠ್ಯವನ್ನು ನೋಡಲು ನೀವು ಪ್ರತಿ ಖಾಲಿ ಮೇಲೆ ಕ್ಲಿಕ್ ಮಾಡಬಹುದು ಅಥವಾ:   
ಕನ್ನಡ ಜರ್ಮನ್ ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. Wa---- b-- d-- R---- a------. Warte, bis der Regen aufhört. 0
ನಾನು ತಯಾರಾಗುವವರೆಗೆ ಕಾಯಿ. Wa---- b-- i-- f----- b--. Warte, bis ich fertig bin. 0
ಅವನು ಹಿಂತಿರುಗಿ ಬರುವವರೆಗೆ ಕಾಯಿ. Wa---- b-- e- z----------. Warte, bis er zurückkommt. 0
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. Ic- w----- b-- m---- H---- t------ s---. Ich warte, bis meine Haare trocken sind. 0
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. Ic- w----- b-- d-- F--- z- E--- i--. Ich warte, bis der Film zu Ende ist. 0
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. Ic- w----- b-- d-- A---- g--- i--. Ich warte, bis die Ampel grün ist. 0
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? Wa-- f----- d- i- U-----? Wann fährst du in Urlaub? 0
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? No-- v-- d-- S-----------? Noch vor den Sommerferien? 0
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. Ja- n--- b---- d-- S----------- b-------. Ja, noch bevor die Sommerferien beginnen. 0
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. Re------ d-- D---- b---- d-- W----- b------. Reparier das Dach, bevor der Winter beginnt. 0
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. Wa--- d---- H----- b---- d- d--- a- d-- T---- s----. Wasch deine Hände, bevor du dich an den Tisch setzt. 0
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. Sc----- d-- F------- b---- d- r--------. Schließ das Fenster, bevor du rausgehst. 0
ಮನೆಗೆ ಯಾವಾಗ ಹಿಂದಿರುಗುತ್ತೀಯ? Wa-- k----- d- n--- H----? Wann kommst du nach Hause? 0
ಪಾಠಗಳ ನಂತರವೇ? Na-- d-- U---------? Nach dem Unterricht? 0
ಹೌದು, ಪಾಠಗಳು ಮುಗಿದ ನಂತರ. Ja- n------ d-- U--------- a-- i--. Ja, nachdem der Unterricht aus ist. 0
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. Na----- e- e---- U----- h----- k----- e- n---- m--- a-------. Nachdem er einen Unfall hatte, konnte er nicht mehr arbeiten. 0
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. Na----- e- d-- A----- v------- h----- i-- e- n--- A------ g-------. Nachdem er die Arbeit verloren hatte, ist er nach Amerika gegangen. 0
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. Na----- e- n--- A------ g------- w--- i-- e- r---- g-------. Nachdem er nach Amerika gegangen war, ist er reich geworden. 0

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.