ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   et Sidesõnad 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [üheksakümmend kuus]

Sidesõnad 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಎಸ್ಟೋನಿಯನ್ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. Ma t----- ü--- k--- k-- ä--------- h------. Ma tõusen üles kohe kui äratuskell heliseb. 0
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. Ma o--- v------ k--- k-- õ----- p---. Ma olen väsinud kohe kui õppima pean. 0
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. Ma l------ t-------- k--- k-- 60 s---. Ma lõpetan töötamise kohe kui 60 saan. 0
ಯಾವಾಗ ಫೋನ್ ಮಾಡುತ್ತೀರಾ? Mi---- t- h--------? Millal te helistate? 0
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. Ko-- k-- m-- o- h--- a---. Kohe kui mul on hetk aega. 0
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ Ta h------- k--- k-- t-- o- h--- a---. Ta helistab kohe kui tal on hetk aega. 0
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? Ku- k--- t- t------? Kui kaua te töötate? 0
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Ma t----- n-- k---- k--- s---. Ma töötan nii kaua, kuni saan. 0
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Ma t----- n-- k---- k--- o--- t----. Ma töötan nii kaua, kuni olen terve. 0
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. Ta l---- v----- s---- a------ e- t------. Ta lamab voodis selle asemel, et töötada. 0
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. Ta l--- a------- s---- a------ e- s--- t---. Ta loeb ajalehte selle asemel, et süüa teha. 0
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. Ta i---- p---- s---- a------ e- k--- m----. Ta istub pubis selle asemel, et koju minna. 0
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. Ni- p---- k-- m--- t---- e--- t- s---. Nii palju kui mina tean, elab ta siin. 0
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. Ni- p---- k-- m--- t---- o- t- n---- h----. Nii palju kui mina tean, on ta naine haige. 0
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. Ni- p---- k-- m--- t---- o- t- t----. Nii palju kui mina tean, on ta töötu. 0
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Ma m------ s----- m---- o------ t------ j------. Ma magasin sisse, muidu oleksin täpselt jõudnud. 0
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Ma j--- b------ m---- m---- o------ t------ j------. Ma jäin bussist maha, muidu oleksin täpselt jõudnud. 0
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Ma e- l------ t---- m---- o------ t------ j------. Ma ei leidnud teed, muidu oleksin täpselt jõudnud. 0

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.