ಕನ್ನಡ » ಆಂಗ್ಲ ಭಾಷೆ UK ಲೋಕಾರೂಢಿ ೩
ಕನ್ನಡ | English UK | |
ನೀವು ಧೂಮಪಾನ ಮಾಡುತ್ತೀರಾ? | Do y-- s----? | + |
ಮುಂಚೆ ಮಾಡುತ್ತಿದ್ದೆ. | I u--- t-. | + |
ಆದರೆ ಈಗ ಧೂಮಪಾನ ಮಾಡುವುದಿಲ್ಲ. | Bu- I d---- s---- a------. | + |
ನಾನು ಧೂಮಪಾನ ಮಾಡಿದರೆ ನಿಮಗೆ ತೊಂದರೆ ಆಗುತ್ತದೆಯೆ? | Do-- i- d------ y-- i- I s----? | + |
ಇಲ್ಲ, ಖಂಡಿತ ಇಲ್ಲ. | No- a--------- n--. | + |
ಅದು ನನಗೆ ತೊಂದರೆ ಮಾಡುವುದಿಲ್ಲ. | It d------ d------ m-. | + |
ಏನನ್ನಾದರೂ ಕುಡಿಯುವಿರಾ? | Wi-- y-- d---- s--------? | + |
ಬ್ರಾಂಡಿ? | A b-----? | + |
ಬೇಡ, ಬೀರ್ ವಾಸಿ. | No- p--------- a b---. | + |
ನೀವು ಬಹಳ ಪ್ರಯಾಣ ಮಾಡುತ್ತೀರಾ? | Do y-- t----- a l--? | + |
ಹೌದು, ಅವುಗಳಲ್ಲಿ ಹೆಚ್ಚಿನವು ವ್ಯವಹಾರ ಸಂಬಂಧಿತ. | Ye-- m----- o- b------- t----. | + |
ಆದರೆ ನಾವು ಈಗ ಇಲ್ಲಿ ರಜೆಯಲ್ಲಿದ್ದೇವೆ. | Bu- n-- w---- o- h------. | + |
ಅಬ್ಬಾ! ಏನು ಸೆಖೆ. | It-- s- h--! | + |
ಹೌದು, ಇಂದು ನಿಜವಾಗಿಯು ತುಂಬ ಸೆಖೆಯಾಗಿದೆ. | Ye-- t---- i--- r----- h--. | + |
ಉಪ್ಪರಿಗೆ ಮೊಗಸಾಲೆಗೆ ಹೋಗೋಣವೆ? | Le--- g- t- t-- b------. | + |
ನಾಳೆ ಇಲ್ಲಿ ಒಂದು ಸಂತೋಷಕೂಟ ಇದೆ. | Th----- a p---- h--- t-------. | + |
ನೀವೂ ಸಹ ಬರುವಿರಾ? | Ar- y-- a--- c-----? | + |
ಹೌದು, ನಮಗೂ ಸಹ ಆಹ್ವಾನ ಇದೆ. | Ye-- w---- a--- b--- i------. | + |
ಭಾಷೆ ಮತ್ತು ಲಿಪಿ.
ಪ್ರತಿಯೊಂದು ಭಾಷೆಯು ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಾತನಾಡುವಾಗ ನಾವು ನಮ್ಮ ಯೋಚನೆಗಳನ್ನು ಮತ್ತು ಅನುಭವಗಳ ಬಗ್ಗೆ ಹೇಳುತ್ತೇವೆ. ಆವಾಗ ನಾವು ನಮ್ಮ ಭಾಷೆಯ ಎಲ್ಲಾ ನಿಯಮಗಳನ್ನು ಪಾಲಿಸುವುದಿಲ್ಲ. ನಾವು ನಮ್ಮದೆ ಆದ ಭಾಷೆಗಳನ್ನು,, ನಮ್ಮದೆ ಆಡುಭಾಷೆಗಳನ್ನು ಉಪಯೋಗಿಸುತ್ತೇವೆ. ಲಿಖಿತ ಭಾಷೆಯಲ್ಲಿ ಅದು ವಿಭಿನ್ನ. ಇಲ್ಲಿ ನಮ್ಮ ಭಾಷೆಯ ಎಲ್ಲಾ ಕಟ್ಟುಪಾಡುಗಳು ತೋರ್ಪಡುತ್ತವೆ. ಲಿಪಿ ಒಂದು ಭಾಷೆಗೆ ಅದರ ನೈಜ ಸ್ವರೂಪವನ್ನು ನೀಡುತ್ತದೆ. ಅದು ಭಾಷೆಯನ್ನು ಕಾಣುವಂತೆ ಮಾಡುತ್ತದೆ. ಲಿಪಿಯ ಮೂಲಕ ಜ್ಞಾನವನ್ನು ಸಾವಿರಾರು ವರ್ಷಗಳ ಮೂಲಕ ಮುಂದುವರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಲಿಪಿ ಪ್ರತಿಯೊಂದು ಪ್ರೌಢ ಸಂಸ್ಕೃತಿಯ ತಳಹದಿಯಾಗಿದೆ. ಮೊಟ್ಟಮೊದಲ ಲಿಪಿ ಸುಮಾರು ೫೦೦೦ ವರ್ಷಗಳ ಹಿಂದೆ ಆವಿಷ್ಕಾರವಾಯಿತು. ಅದು ಸುಮೇರಿಯನ್ ಅವರ ಬೆಣೆಯಾಕಾರದ ಲಿಪಿ. ಅದನ್ನು ಜೇಡಿ ಮಣ್ಣಿನಿಂದ ಮಾಡಿದ ಹಲಗೆಯ ಮೇಲೆ ಕೊರೆಯಲಾಗುತ್ತಿತ್ತು.ಈ ಬೆಣೆಲಿಪಿಯನ್ನು ೩೦೦೦ ವರ್ಷಗಳಷ್ಟು ದೀರ್ಘ ಕಾಲ ಉಪಯೋಗಿಸಲಾಗುತ್ತಿತ್ತು. ಈಜಿಪ್ಷಿಯನ್ನರ ವಸ್ತುಚಿತ್ರ ಲಿಪಿ ಸಹ ಸುಮಾರು ಇಷ್ಟೆ ಕಾಲ ಬಳಕೆಯಲ್ಲಿತ್ತು. ಇವುಗಳೊಡನೆ ಸಂಖ್ಯೆ ಇಲ್ಲದಷ್ಟು ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ. ವಸ್ತುಚಿತ್ರಗಳು ಹೋಲಿಕೆಯ ದೃಷ್ಟಿಯಲ್ಲಿ ಒಂದು ಜಟಿಲ ಲಿಪಿ ಪದ್ಧತಿ ಎಂದು ತೋರುತ್ತದೆ. ಇದರ ಆವಿಷ್ಕಾರಕ್ಕೆ ಬಹುಶಃ ಒಂದು ಅತಿ ಸಾಧಾರಣವಾದ ಕಾರಣವಿದೆ ಅನ್ನಿಸುತ್ತದೆ. ಅಂದಿನ ಈಜಿಪ್ಟ್ ಸಾಮ್ರಾಜ್ಯ ಸಾವಿರಾರು ಪ್ರಜೆಗಳೊಡನೆ ವಿಶಾಲವಾಗಿತ್ತು. ದೈನಂದಿಕ ಚಟುವಟಿಕೆಗಳು ಮತ್ತು ವಾಣಿಜ್ಯಗಳನ್ನು ಸಂಯೋಜಿಸಲಾಗಬೇಕಾಗಿತ್ತು. ತೆರಿಗೆಗಳು ಮತ್ತು ವೆಚ್ಚಗಳನ್ನು ದಕ್ಷವಾಗಿ ನಿಯಂತ್ರಿಸಬೇಕಾಗಿತ್ತು. ಇದಕ್ಕಾಗಿ ಈಜಿಪ್ಷಿಯನ್ನರು ಲಿಪಿ ಚಿಹ್ನಗಳನ್ನು ಆವಿಷ್ಕರಿಸಿದರು. ಅಕ್ಷರಮಾಲೆಯನ್ನು ಅವಲಂಬಿಸಿದ ಲಿಪಿ ಪದ್ಧತಿ ಸುಮೇರಿಯನ್ನರಿಗೆ ಸೇರು ತ್ತದೆ. ಪ್ರತಿ ಲಿಪಿಯು ತನ್ನನ್ನು ಬಳಸುವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಅದಲ್ಲದೆ ಪ್ರತಿಯೊಂದು ದೇಶವು ತನ್ನ ಲಿಪಿಯಲ್ಲಿ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಕೈಬರವಣಿಗೆ ಕಡಿಮೆಯಾಗುತ್ತಲೆ ಇದೆ. ಆಧುನಿಕ ತಂತ್ರಜ್ಞಾನ ಇದನ್ನು ಬಹುತೇಕ ಅನವಶ್ಯಕವನ್ನಾಗಿ ಮಾಡಿದೆ. ಆದ್ದರಿಂದ ಕೇವಲ ಮಾತನಾಡಬೇಡಿ, ಯಾವಾಗಲಾದರೊಮ್ಮೆ ಬರೆಯಿರಿ ಕೂಡ.