ಕನ್ನಡ » ಆಂಗ್ಲ ಭಾಷೆ UK ವಿಮಾನ ನಿಲ್ದಾಣದಲ್ಲಿ
೩೫ [ಮೂವತ್ತೈದು]
ವಿಮಾನ ನಿಲ್ದಾಣದಲ್ಲಿ

35 [thirty-five]
At the airport
ಕನ್ನಡ | English UK | |
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ | I’- l--- t- b--- a f----- t- A-----. | + |
ಅಲ್ಲಿಗೆ ನೇರವಾದ ವಿಮಾನ ಇದೆಯೆ? | Is i- a d----- f-----? | + |
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. | A w----- s---- n----------- p-----. | + |
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. | I w---- l--- t- c------ m- r----------. | + |
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. | I w---- l--- t- c----- m- r----------. | + |
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. | I w---- l--- t- c----- m- r----------. | + |
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? | Wh-- i- t-- n--- f----- t- R---? | + |
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? | Ar- t---- t-- s---- a--------? | + |
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. | No- w- h--- o--- o-- s--- a--------. | + |
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? | Wh-- d- w- l---? | + |
ನಾವು ಯಾವಾಗ ಅಲ್ಲಿರುತ್ತೇವೆ? | Wh-- w--- w- b- t----? | + |
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? | Wh-- d--- a b-- g- t- t-- c--- c----- / c----- (a-.)? | + |
ಇದು ನಿಮ್ಮ ಪೆಟ್ಟಿಗೆಯೆ? | Is t--- y--- s-------? | + |
ಇದು ನಿಮ್ಮ ಚೀಲವೆ? | Is t--- y--- b--? | + |
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? | Is t--- y--- l------? | + |
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? | Ho- m--- l------ c-- I t---? | + |
೨೦ ಕಿ.ಗ್ರಾಂ. | Tw---- k----. | + |
ಏನು, ಕೇವಲ ೨೦ ಕಿ.ಗ್ರಾಂಗಳೆ? | Wh--? O--- t----- k----? | + |
ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.
ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು.ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!