ಕನ್ನಡ » ಆಂಗ್ಲ ಭಾಷೆ UK ಅಂಚೆ ಕಛೇರಿಯಲ್ಲಿ
ಕನ್ನಡ | English UK | |
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? | Wh--- i- t-- n------ p--- o-----? | + |
ಅಂಚೆ ಕಛೇರಿ ಇಲ್ಲಿಂದ ದೂರವೆ? | Is t-- p--- o----- f-- f--- h---? | + |
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? | Wh--- i- t-- n------ m--- b--? | + |
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. | I n--- a c----- o- s-----. | + |
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. | Fo- a c--- a-- a l-----. | + |
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? | Ho- m--- i- t-- p------ t- A------? | + |
ಈ ಪೊಟ್ಟಣದ ತೂಕ ಎಷ್ಟು? | Ho- h---- i- t-- p------? | + |
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? | Ca- I s--- i- b- a-- m---? | + |
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? | Ho- l--- w--- i- t--- t- g-- t----? | + |
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? | Wh--- c-- I m--- a c---? | + |
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? | Wh--- i- t-- n------ t-------- b----? | + |
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? | Do y-- h--- c------ c----? | + |
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? | Do y-- h--- a t-------- d--------? | + |
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? | Do y-- k--- t-- a--- c--- f-- A------? | + |
ಒಂದು ಕ್ಷಣ, ನಾನು ನೋಡುತ್ತೇನೆ. | On- m------ I--- l--- i- u-. | + |
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. | Th- l--- i- a----- b---. | + |
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? | Wh--- n----- d-- y-- d---? | + |
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. | Yo- h--- t- d--- a z--- f----! | + |
ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ
ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ.ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!