ಕನ್ನಡ » ಆಂಗ್ಲ ಭಾಷೆ UK ಸಮಯ
ಕನ್ನಡ | English UK | |
ಕ್ಷಮಿಸಿ! | Ex---- m-! | + |
ಈಗ ಎಷ್ಟು ಸಮಯ ಆಗಿದೆ? | Wh-- t--- i- i-- p-----? | + |
ಧನ್ಯವಾದಗಳು! | Th--- y-- v--- m---. | + |
ಈಗ ಒಂದು ಘಂಟೆ. | It i- o-- o------. | + |
ಈಗ ಎರಡು ಘಂಟೆ. | It i- t-- o------. | + |
ಈಗ ಮೂರು ಘಂಟೆ. | It i- t---- o------. | + |
ಈಗ ನಾಲ್ಕು ಘಂಟೆ. | It i- f--- o------. | + |
ಈಗ ಐದು ಘಂಟೆ. | It i- f--- o------. | + |
ಈಗ ಆರು ಘಂಟೆ. | It i- s-- o------. | + |
ಈಗ ಏಳು ಘಂಟೆ. | It i- s---- o------. | + |
ಈಗ ಎಂಟು ಘಂಟೆ. | It i- e---- o------. | + |
ಈಗ ಒಂಬತ್ತು ಘಂಟೆ. | It i- n--- o------. | + |
ಈಗ ಹತ್ತು ಘಂಟೆ. | It i- t-- o------. | + |
ಈಗ ಹನ್ನೂಂದು ಘಂಟೆ. | It i- e----- o------. | + |
ಈಗ ಹನ್ನೆರಡು ಘಂಟೆ. | It i- t----- o------. | + |
ಒಂದು ನಿಮಿಷದಲ್ಲಿ ಅರವತ್ತು ಸೆಕೆಂಡುಗಳಿವೆ. | A m----- h-- s---- s------. | + |
ಒಂದು ಘಂಟೆಯಲ್ಲಿ ಅರವತ್ತು ನಿಮಿಷಗಳಿವೆ. | An h--- h-- s---- m------. | + |
ಒಂದು ದಿವಸದಲ್ಲಿ ಇಪ್ಪತ್ನಾಲ್ಕು ಘಂಟೆಗಳಿವೆ. | A d-- h-- t---------- h----. | + |
ಭಾಷಾ ಕುಟುಂಬಗಳು.
ಪ್ರಪಂಚದಲ್ಲಿ ಸುಮಾರು ೭೦೦ ಕೋಟಿ ಮನುಷ್ಯರಿದ್ದಾರೆ. ಮತ್ತು ಅವರುಗಳು ಸುಮಾರು ೭೦೦೦ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಮನುಷ್ಯರಂತೆಯೆ, ಭಾಷೆಗಳೂ ಸಹ ಒಂದರೊಡನೆ ಒಂದು ಸಂಬಂಧಗಳನ್ನು ಹೊಂದಿವೆ. ಅಂದರೆ ಅವುಗಳೆಲ್ಲವು ಒಂದು ಮೂಲಭಾಷೆಯಿಂದ ಹೊಮ್ಮಿವೆ. ಆದರೆ ಹಲವು ಭಾಷೆಗಳು ಸಂಪೂರ್ಣವಾಗಿ ಬೇರ್ಪಟ್ಟಿರುತ್ತವೆ. ಅವುಗಳು ಬೇರೆ ಯಾವುದೇ ಭಾಷೆಗಳೊಂದಿಗೆ ಅನುವಂಶೀಯ ಸಂಬಂಧ ಹೊಂದಿರುವುದಿಲ್ಲ. ಉದಾಹರಣೆಗೆ ಯುರೋಪ್ ನಲ್ಲಿ ಬಾಸ್ಕ್ ಭಾಷೆ ಬೇರ್ಪಟ್ಟ ಭಾಷೆಯಾಗಿದೆ. ಹೆಚ್ಚಿನ ಭಾಷೆಗಳಿಗೆ ತಂದೆ,ತಾಯಿ,ಮಕ್ಕಳು ಹಾಗೂ ಸಹೋದರ,ಸಹೋದರಿಯರು ಇದ್ದಾರೆ. ಅಂದರೆ ಅವುಗಳು ಒಂದು ಖಚಿತವಾದ ಭಾಷೆಗಳ ಕುಟುಂಬಕ್ಕೆ ಸೇರಿರುತ್ತವೆ. ಭಾಷೆಗಳು ಹೇಗೆ ಒಂದನ್ನೊಂದು ಹೋಲುತ್ತವೆ ಎಂಬುದು ತುಲನೆ ಮಾಡಿದಾಗ ಗೊತ್ತಾಗುತ್ತದೆ. ಭಾಷಾಸಂಶೋಧಕರು ಈವಾಗ ಸುಮಾರು ೩೦೦ ಅನುವಂಶೀಯ ಘಟಕಗಳನ್ನು ಗುರುತಿಸಿದ್ದಾರೆ. ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಒಳಗೊಂಡಿರುವ ೧೮೦ ಕುಟುಂಬಗಳು ಇವೆ. ಮಿಕ್ಕ ೧೨೦ ಭಾಷೆಗಳು ಪ್ರತ್ಯೇಕ ಭಾಷೆಗಳು.ಬಹು ದೊಡ್ಡ ಭಾಷೆಗಳ ಕುಟುಂಬ ಇಂಡೋ-ಜರ್ಮನ್ . ಈ ಕುಟುಂಬದಲ್ಲಿ ಸುಮಾರು ೨೮೦ ವಿವಿಧ ಭಾಷೆಗಳಿವೆ. ಇವುಗಳಲ್ಲಿ ರೊಮೆನಿಕ್, ಜರ್ಮಾನಿಕ್ ಹಾಗೂ ಸ್ಲಾವಿಕ್ ಭಾಷೆಗಳು ಇವೆ. ಈ ಭಾಷೆಗಳನ್ನು ಸುಮಾರು ೩೦೦ ಕೋಟಿ ಜನರು ಎಲ್ಲಾ ಭೂಖಂಡಗಳಲ್ಲಿ ಬಳಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬ ಏಷ್ಯಾದಲ್ಲಿ ಪ್ರಬಲ. ಸುಮಾರು ೧೩೦ ಕೋಟಿ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಚೀನಾ-ಟಿಬೆಟ್ ಭಾಷಾಕುಟುಂಬದಲ್ಲಿ ಚೀನ ಭಾಷೆ ಪ್ರಮುಖವಾದದ್ದು, ಆಫ್ರಿಕಾದಲ್ಲಿ ಮೂರನೇಯ ಅತಿ ದೊಡ್ಡ ಭಾಷಾಕುಟುಂಬ ಇದೆ. ಅದು ಹರಡಿಕೊಂಡಿರುವ ಪ್ರದೇಶದಿಂದ ಅದಕ್ಕೆ ನೈಜರ್-ಕಾಂಗೊ ಎಂಬ ಹೆಸರು ಬಂದಿದೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದು ಕೊಳ್ಳುತ್ತಿವೆ. ಈ ಭಾಷಾಕುಟುಂಬದ ಪ್ರಮುಖ ಭಾಷೆ ಸ್ವಾಹಿಲಿ. ಹತ್ತಿರದ ನೆಂಟಸ್ತಿಕೆ, ಉತ್ತಮವಾದ ಸಾಮರಸ್ಯ ಎನ್ನುವುದು ಸಮಂಜಸ. ಸಂಬಂಧಗಳಿರುವ ಭಾಷೆಗಳನ್ನು ಮಾತನಾಡುವ ಜನರು ಪರಸ್ಪರ ಅರ್ಥ ಮಾಡಿಕೊಳ್ಳುತ್ತಾರೆ. ಅವರುಗಳು ಬೇರೆ ಭಾಷೆಗಳನ್ನು ಹೆಚ್ಚು ಕಡಿಮೆ ಬೇಗ ಕಲಿಯುತ್ತಾರೆ. ಅದ್ದರಿಂದ ಭಾಷೆಗಳನ್ನು ಕಲಿಯಿರಿ- ಕುಟುಂಬಗಳ ಸಮಾವೇಶಗಳು ಸುಂದರ!