ಕನ್ನಡ » ಪೋರ್ಚುಗೀಸ್ ಭಾಷೆ PT ಪರಿಚಯಿಸಿ ಕೊಳ್ಳುವುದು
೩ [ಮೂರು]
ಪರಿಚಯಿಸಿ ಕೊಳ್ಳುವುದು

3 [três]
Conhecer
ಕನ್ನಡ | português PT | |
ನಮಸ್ಕಾರ. | Ol-! | + |
ನಮಸ್ಕಾರ. | Bo- d--! | + |
ಹೇಗಿದ್ದೀರಿ? | Co-- e----? | + |
ಯುರೋಪ್ ನಿಂದ ಬಂದಿರುವಿರಾ? | Vo-- é d- E-----? | + |
ಅಮೇರಿಕದಿಂದ ಬಂದಿರುವಿರಾ? | Vo-- é d- A------? | + |
ಏಶೀಯದಿಂದ ಬಂದಿರುವಿರಾ? | Vo-- é d- Á---? | + |
ಯಾವ ಹೋಟೆಲ್ ನಲ್ಲಿ ಇದ್ದೀರಿ? | Em q-- h---- é q-- (v---) v---? | + |
ಯಾವಾಗಿನಿಂದ ಇಲ್ಲಿದೀರಿ? | Há q----- t---- é q-- (v---) e--- c- ? | + |
ಏಷ್ಟು ಸಮಯ ಇಲ್ಲಿ ಇರುತ್ತೀರಿ? | Qu---- t---- é q-- (v---) v-- f----? | + |
ನಿಮಗೆ ಈ ಪ್ರದೇಶ ಇಷ್ಟವಾಯಿತೆ? | (V---) g---- d- e---- c- ? | + |
ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ? | (V---) e--- a p----- f----- a---? | + |
ನನ್ನನ್ನು ಒಮ್ಮೆ ಭೇಟಿ ಮಾಡಿ. | Ve--- v--------- u- d--! | + |
ಇದು ನನ್ನ ವಿಳಾಸ. | Aq-- e--- a m---- m-----. | + |
ನಾಳೆ ನಾವು ಭೇಟಿ ಮಾಡೋಣವೆ? | Ve------ a-----? | + |
ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ. | De------- m-- j- t---- o----- p-----. | + |
ಹೋಗಿ ಬರುತ್ತೇನೆ. | Ad---! | + |
ಮತ್ತೆ ಕಾಣುವ. | At- à p------! | + |
ಇಷ್ಟರಲ್ಲೇ ಭೇಟಿ ಮಾಡೋಣ. | At- b----! | + |
ಅಕ್ಷರಮಾಲೆ.
ಭಾಷೆಗಳ ಮೂಲಕ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಏನನ್ನು ಯೋಚಿಸುತ್ತೇವೆ ಅಥವಾ ಅನುಭವಿಸುತ್ತೇವೆ ಎಂಬುದನ್ನು ಬೇರೆಯವರಿಗೆ ಹೇಳುತ್ತೇವೆ. ಬರವಣಿಗೆಯ ಕರ್ತವ್ಯ ಕೂಡ ಇದೇನೆ. ಹೆಚ್ಚಿನ ಭಾಷೆಗಳು ಒಂದು ಲಿಪಿಯನ್ನು ಹೊಂದಿರುತ್ತವೆ. ಲಿಪಿಗಳು ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿನ್ಹೆಗಳು ಬೇರೆ ಬೇರೆ ತರಹ ಕಾಣಿಸಬಹುದು. ಬಹಳಷ್ಟು ಲಿಪಿಗಳು ಅಕ್ಷರಗಳನ್ನು ಹೊಂದಿರುತ್ತವೆ. ಈ ಲಿಪಿಗಳನ್ನು ಅಕ್ಷರಮಾಲೆ ಎಂದು ಕರೆಯುತ್ತಾರೆ. ಅಕ್ಷರಮಾಲೆ ವಿಶಿಷ್ಟವಾಗಿ ಜೋಡಿಸಿದ ರೇಖಾಚಿತ್ರ ಚಿಹ್ನೆಗಳ ಸಮುದಾಯ . ಈ ಚಿಹ್ನೆಗಳನ್ನು ನಿರ್ದಿಷ್ಟ ಕ್ರಮಾನುಸಾರ ಪದಗಳಾಗಿ ಜೋಡಿಸುತ್ತಾರೆ. ಪ್ರತಿ ಚಿಹ್ನೆಗೂ ಒಂದು ನಿಖರವಾದ ಉಚ್ಚಾರಣೆ ಇರುತ್ತದೆ. ಅಲ್ಫಾಬೇಟ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಆಲ್ಫ ಮತ್ತು ಬೀಟ.ಭೂತಕಾಲದಲ್ಲಿ ವಿವಿಧವಾದ ಹೆಚ್ಚಿನ ಸಂಖ್ಯೆಯ ಅಕ್ಷರಗಳಿದ್ದವು. ಮೂರು ಸಾವಿರ ವರ್ಷಗಳಿಗೂ ಹಿಂದೆಯೆ ಲಿಪಿಚಿಹ್ನೆಗಳನ್ನು ಜನರು ಬಳಸುತ್ತಿದ್ದರು. ಮುಂಚೆ ಲಿಪಿ ಚಿಹ್ನೆಗಳು ಮಾಂತ್ರಿಕ ಚಿಹ್ನೆಗಳಾಗಿದ್ದವು. ಕೇವಲ ಕೆಲವೇ ಜನರಿಗೆ ಅವುಗಳ ಅರ್ಥ ತಿಳಿದಿತ್ತು. ನಂತರ ಈ ಚಿಹ್ನೆಗಳು ತಮ್ಮ ನಿಗೂಢ ಅರ್ಥಗಳನ್ನು ಕಳೆದುಕೊಂಡವು. ಅಕ್ಷರಗಳಿಗೆ ಈಗ ಯಾವುದೇ ಅಂತರಾರ್ಥವಿಲ್ಲ. ಕೇವಲ ಬೇರೆ ಅಕ್ಷರಗಳೊಡನೆ ಜೋಡಿಸಿದಾಗ ಅವುಗಳು ಅರ್ಥವನ್ನು ನೀಡುತ್ತವೆ. ಲಿಪಿಗಳು,ಉದಾಹರಣೆಗೆ ಚೀನಾ ಭಾಷೆಯಲ್ಲಿ, ಇವು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವು ಚಿತ್ರಗಳನ್ನು ಹೋಲುತ್ತವೆ, ಹಾಗೂ ಅದು ಏನನ್ನು ನಿರೂಪಿಸುತ್ತದೊ ಅದನ್ನೆ ಪ್ರತಿಪಾದಿಸುತ್ತದೆ. ನಾವು ಬರೆಯುವಾಗ ನಮ್ಮ ಆಲೋಚನೆಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುತ್ತೇವೆ. ನಮ್ಮ ತಿಳಿವಳಿಕೆಗಳನ್ನು ಚಿಹ್ನೆಗಳ ಮೂಲಕ ಸ್ಥಿರಪಡಿಸುತ್ತೇವೆ. ನಮ್ಮ ಮಿದುಳು ಅಕ್ಷರಗಳನ್ನು ವಿಸಂಕೇತಿಸಲು ಕಲಿತುಕೊಂಡಿದೆ. ಚಿಹ್ನೆಗಳು ಪದಗಳಾಗುತ್ತವೆ, ಪದಗಳು ವಿಚಾರಗಳಾಗುತ್ತವೆ. ಹಾಗಾಗಿ ಪಠ್ಯಗಳು ಸಾವಿರಾರು ವರ್ಷಉಳಿಯುತ್ತವೆ. ಮತ್ತು ಇನ್ನೂ ಅರ್ಥವಾಗುತ್ತಾ ಇರುತ್ತವೆ.