ಪದಗುಚ್ಛ ಪುಸ್ತಕ

ನಿದ್ರೆಯಲ್ಲಿ ಕಲಿಯುವುದು.

ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ನಿದ್ರೆಯಲ್ಲಿ ಕಲಿಯುವುದು.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಚಲಿತ ವಿದ್ಯಾಭ್ಯಾಸದ ಅಂಗವಾಗಿದೆ. ಕಲಿಯುವುದು ಇಷ್ಟು ಕಷ್ಟಕರವಾಗಿಲ್ಲದಿದ್ದರೆ! ಯಾರಿಗೆ ಕಲಿಯಲು ಕಷ್ಟವಾಗಿದೆಯೊ,ಅವರಿಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ನಾವು ನಿದ್ರೆಯಲ್ಲಿ ಅತಿ ಪರಿಣಾಮಕಾರಿಯಾಗಿ ಕಲಿಯುತ್ತೇವೆ. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ನಿರ್ಣಯಕ್ಕೆ ಬಂದಿವೆ. ಇದನ್ನು ನಾವು ಭಾಷೆಗಳನ್ನು ಕಲಿಯಲು ಬಳಸಬಹುದು. ನಾವು ನಿದ್ರೆಯಲ್ಲಿ ದಿನದ ಆಗು ಹೋಗುಗಳನ್ನು ಸಂಸ್ಕರಿಸುತ್ತೇವೆ. ನಮ್ಮ ಮಿದುಳು ಹೊಸ ಅನುಭವಗಳನ್ನು ಪರಿಷ್ಕರಿಸುತ್ತದೆ. ನಾವು ಅನುಭವಿಸಿದ್ದೆಲ್ಲದರ ಬಗ್ಗೆ ನಮ್ಮ ಮಿದುಳು ಮತ್ತೊಮ್ಮೆ ಆಲೋಚಿಸುತ್ತದೆ. ತನ್ಮೂಲಕ ಹೊಸ ವಿಷಯಗಳನ್ನು ನಮ್ಮ ಮಿದುಳಿನಲ್ಲಿ ಭದ್ರ ಪಡಿಸಲಾಗುತ್ತದೆ. ನಾವು ಮಲಗುವ ಸ್ವಲ್ಪ ಮುಂಚೆ ನಡೆದದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ. ಮುಖ್ಯವಾದ ವಿಷಯಗಳನ್ನು ಸಾಯಂಕಾಲ ಪುನರಾವರ್ತನೆ ಮಾಡುವುದು ಬಹುಶಹಃ ಸಹಾಯಕಾರಿ. ಪ್ರತಿಯೊಂದು ಕಲಿಯುವ ವಿಷಯಕ್ಕೆ ವಿವಿಧ ನಿದ್ರಾವಸ್ಥೆಗಳು ಹೊಣೆಯಾಗಿರುತ್ತವೆ. ಕ್ಷಿಪ್ರ ನೇತ್ರ ಚಲನ ನಿದ್ರಾವಸ್ಥೆ ಸೈಕೊ-ಮೋಟಾರ್ ಕಲಿಕೆಯನ್ನು ಬೆಂಬಲಿಸುತ್ತದೆ. ಸಂಗೀತ ಅಥವಾ ಕ್ರೀಡೆ ಇದಕ್ಕೆ ತಕ್ಕ ಉದಾಹರಣೆಗಳು. ಕೇವಲ ತಿಳಿವಳಿಕೆಯಿಂದ ಕಲಿಯುವುದು ಗಾಢನಿದ್ರೆಯಲ್ಲಿ ಸಂಭವಿಸುತ್ತದೆ. ಈ ಸ್ಥಿತಿಯಲ್ಲಿ ನಾವು ಕಲಿಯುವಾಗ ಏನನ್ನು ಗ್ರಹಿಸಿರುತ್ತೇವೆಯೊ ಅದನ್ನು ಪುನರಾವರ್ತಿಸಲಾಗುತ್ತದೆ. ಅಂದರೆ ಪದಗಳು ಹಾಗೂ ವ್ಯಾಕರಣ ಕೂಡ. ನಾವು ಭಾಷೆಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬ ಕೆಲಸ ಮಾಡಬೇಕಾಗುತ್ತದೆ. ಅದು ಹೊಸ ಪದಗಳನ್ನು ಮತ್ತು ಹೊಸ ನಿಯಮಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ನಿದ್ರೆಯಲ್ಲಿ ಅವೆಲ್ಲವನ್ನು ಪುನರಾವರ್ತಿಸಲಾಗುತ್ತದೆ. ಸಂಶೋಧಕರು ಇದನ್ನು ಪುನರಾವರ್ತನ ಸಿದ್ಧಾಂತವೆಂದು ಕರೆಯುತ್ತಾರೆ. ಆದರೆ ಮನುಷ್ಯ ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯ. ದೇಹ ಮತ್ತು ಮನಸ್ಸು ಚೇತರಿಸಿಕೊಳ್ಳಬೇಕು. ಆವಾಗ ಮಾತ್ರ ಮಿದುಳು ದಕ್ಷವಾಗಿ ಕೆಲಸ ಮಾಡಲು ಆಗುತ್ತದೆ. ಒಳ್ಳೆಯ ನಿದ್ರೆ ಅಂದರೆ ಒಳ್ಳೆಯ ನೆನಪಿನ ನಿರ್ವಹಣೆ ಎಂದು ಹೇಳಬಹುದು. ನಾವು ವಿಶ್ರಮಿಸುವಾಗ ನಮ್ಮ ಮಿದುಳು ಕಾರ್ಯನಿರತವಾಗಿರುತ್ತದೆ. ಹಾಗಿದ್ದಲ್ಲಿ:ನಿಮಗೆ ಶುಭರಾತ್ರಿ!