ಪದಗುಚ್ಛ ಪುಸ್ತಕ

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.