ಪದಗುಚ್ಛ ಪುಸ್ತಕ

ಅಪರಿಚಿತ ಭಾಷೆಗಳು.

© Fizkes | Dreamstime.com
ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.