ಪದಗುಚ್ಛ ಪುಸ್ತಕ

ಸೃಜನಾತ್ಮಕ ಭಾಷೆ.

© Kaspars Grinvalds - Fotolia | Happy young woman using digital tablet outdoors in park
ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!