ಪದಗುಚ್ಛ ಪುಸ್ತಕ

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.