ಪದಗುಚ್ಛ ಪುಸ್ತಕ

ಕಲಿಯುವುದು ಮತ್ತು ಓದುವುದು.

© Nateem | Dreamstime.com
ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.