ಪದಗುಚ್ಛ ಪುಸ್ತಕ

ಆಫ್ರಿಕಾದ ಭಾಷೆಗಳು.

© Milkos | Dreamstime.com
ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.