ಪದಗುಚ್ಛ ಪುಸ್ತಕ

kn ಜನಗಳು / ಜನರು   »   de Personen

೧ [ಒಂದು]

ಜನಗಳು / ಜನರು

ಜನಗಳು / ಜನರು

1 [eins]

Personen

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜರ್ಮನ್ ಪ್ಲೇ ಮಾಡಿ ಇನ್ನಷ್ಟು
ನಾನು i-h ich i-h --- ich 0
ನಾನು ಮತ್ತು ನೀನು ic--u-d du ich und du i-h u-d d- ---------- ich und du 0
ನಾವಿಬ್ಬರು wi- -ei-e wir beide w-r b-i-e --------- wir beide 0
ಅವನು e- er e- -- er 0
ಅವನು ಮತ್ತು ಅವಳು e- u-d -ie er und sie e- u-d s-e ---------- er und sie 0
ಅವರಿಬ್ಬರು si--b-ide sie beide s-e b-i-e --------- sie beide 0
ಗಂಡ de- --nn der Mann d-r M-n- -------- der Mann 0
ಹೆಂಡತಿ d-e--r-u die Frau d-e F-a- -------- die Frau 0
ಮಗು d---K-nd das Kind d-s K-n- -------- das Kind 0
ಒಂದು ಕುಟುಂಬ e--e Fa---ie eine Familie e-n- F-m-l-e ------------ eine Familie 0
ನನ್ನ ಕುಟುಂಬ m-i---Fam---e meine Familie m-i-e F-m-l-e ------------- meine Familie 0
ನನ್ನ ಕುಟುಂಬ ಇಲ್ಲಿ ಇದೆ. Me-ne-Fa----e i-- hi-r. Meine Familie ist hier. M-i-e F-m-l-e i-t h-e-. ----------------------- Meine Familie ist hier. 0
ನಾನು ಇಲ್ಲಿ ಇದ್ದೇನೆ. Ich b-- h-e-. Ich bin hier. I-h b-n h-e-. ------------- Ich bin hier. 0
ನೀನು ಇಲ್ಲಿದ್ದೀಯ. D- -is- hie-. Du bist hier. D- b-s- h-e-. ------------- Du bist hier. 0
ಅವನು ಇಲ್ಲಿದ್ದಾನೆ ಮತ್ತು ಅವಳು ಇಲ್ಲಿದ್ದಾಳೆ. Er i-t --e---n--sie-ist-h--r. Er ist hier und sie ist hier. E- i-t h-e- u-d s-e i-t h-e-. ----------------------------- Er ist hier und sie ist hier. 0
ನಾವು ಇಲ್ಲಿದ್ದೇವೆ. W---s-n--h-er. Wir sind hier. W-r s-n- h-e-. -------------- Wir sind hier. 0
ನೀವು ಇಲ್ಲಿದ್ದೀರಿ. Ih- -e----i-r. Ihr seid hier. I-r s-i- h-e-. -------------- Ihr seid hier. 0
ಅವರುಗಳೆಲ್ಲರು ಇಲ್ಲಿದ್ದಾರೆ S-- s--d --l--h-e-. Sie sind alle hier. S-e s-n- a-l- h-e-. ------------------- Sie sind alle hier. 0

ಭಾಷೆಗಳೊಂದಿಗೆ ಅಲ್ಜ್ ಹೈಮರ್ ಖಾಯಿಲೆ ವಿರುದ್ದ.

ಯಾರು ಬೌದ್ಧಿಕವಾಗಿ ಚುರುಕಾಗಿರಲು ಆಶಿಸುತ್ತಾರೋ ಅವರು ಭಾಷೆಗಳನ್ನು ಕಲಿಯಬೇಕು. ಭಾಷಾಜ್ಞಾನ ಒಬ್ಬರನ್ನು ಚಿತ್ತವೈಕಲ್ಯದಿಂದ ರಕ್ಷಿಸುತ್ತದೆ. ಈ ವಿಷಯವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಕಲಿಯುವವರ ವಯಸ್ಸು ಇದರಲ್ಲಿ ಯಾವ ಪಾತ್ರವನ್ನು ವಹಿಸುವುದಿಲ್ಲ. ಮುಖ್ಯವಾದದ್ದು, ಮಿದುಳನ್ನು ಕ್ರಮಬದ್ಧವಾಗಿ ತರಬೇತಿಗೊಳಿಸುವುದು. (ಹೊಸ) ಪದಗಳನ್ನು ಕಲಿಯುವ ಪ್ರಕ್ರಿಯೆ ಮಿದುಳಿನ ವಿವಿಧ ಭಾಗಗಳನ್ನು ಚುರುಕುಗೊಳಿಸುತ್ತದೆ. ಈ ಭಾಗಗಳು ಅರಿತು ಕಲಿಯುವ ಪ್ರಕ್ರಿಯೆಗಳಿಗೆ ಚಾಲನೆ ನೀಡುತ್ತವೆ. ಬಹು ಭಾಷೆಗಳನ್ನು ಬಲ್ಲವರು ಇದರಿಂದಾಗಿ ಹೆಚ್ಚು ಹುಷಾರಾಗಿರುತ್ತಾರೆ. ಇಷ್ಟಲ್ಲದೆ ಹೆಚ್ಚು ಏಕಾಗ್ರಚಿತ್ತರಾಗಿರುತ್ತಾರೆ. ಬಹು ಭಾಷಾಜ್ಞಾನ ಇನ್ನೂ ಹಲವು ಅನುಕೂಲತೆಗಳನ್ನು ಒದಗಿಸುತ್ತದೆ. ಬಹು ಭಾಷೆಗಳನ್ನು ಬಲ್ಲವರು ಚುರುಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ವೇಗವಾಗಿ ನಿರ್ಣಯಗಳನ್ನು ತಲುಪುತ್ತಾರೆ. ಅದಕ್ಕೆ ಕಾರಣ: ಅವರ ಮಿದುಳು ಶೀಘ್ರವಾಗಿ ಆರಿಸುವುದನ್ನು ಕಲಿತಿರುತ್ತದೆ. ಅದು ಪ್ರತಿಯೊಂದು ವಿಷಯವನ್ನು ಕಡೆಯ ಪಕ್ಷ ಎರಡು ವಿಧವಾಗಿ ನಿರೂಪಿಸಲು ಕಲಿತಿರುತ್ತದೆ. ಇದರಿಂದಾಗಿ ಪ್ರತಿ ನಿರೂಪಣೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಬಹು ಭಾಷೆಗಳನ್ನು ಬಲ್ಲವರು ಹಾಗಾಗಿ ಯಾವಾಗಲು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಬೇಕು. ಅವರ ಮಿದುಳು ಹಲವಾರು ಸಾಧ್ಯತೆಗಳಿಂದ ಒಂದನ್ನು ಆರಿಸುವುದರಲ್ಲಿ ಪಳಗಿರುತ್ತದೆ. ಈ ಅಭ್ಯಾಸಗಳು ಕೇವಲ ಕಲಿಕೆ ಕೇಂದ್ರಗಳನ್ನು ಮಾತ್ರ ಉತ್ತೇಜಿಸುವುದಿಲ್ಲ. ಮಿದುಳಿನ ವಿವಿಧ ಭಾಗಗಳು ಬಹುಭಾಷಾಪರಿಣತೆಯಿಂದ ಪ್ರಯೋಜನ ಪಡೆಯುತ್ತವೆ. ಭಾಷೆಗಳ ಜ್ಞಾನದಿಂದಾಗಿ ಹೆಚ್ಚಾದ ಅರಿವಿನ ಹತೋಟಿ ಇರುತ್ತದೆ. ಭಾಷೆಗಳ ಜ್ಞಾನ ಖಂಡಿತವಾಗಿ ಒಬ್ಬರನ್ನು ಚಿತ್ತವೈಕಲ್ಯದಿಂದ ರಕ್ಷಿಸುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಬಹು ಭಾಷೆಗಳನ್ನು ಬಲ್ಲವರಲ್ಲಿ ಈ ಖಾಯಿಲೆ ನಿಧಾನವಾಗಿ ಉಲ್ಬಣವಾಗುತ್ತದೆ. ಮತ್ತು ಇವರ ಮಿದುಳು ಖಾಯಿಲೆಯ ಪರಿಣಾಮಗಳನ್ನು ಮೇಲಾಗಿ ಸರಿದೂಗಿಸುತ್ತದೆ. ಚಿತ್ತವೈಕಲ್ಯದ ಚಿನ್ಹೆಗಳು ಕಲಿಯುವವರಲ್ಲಿ ದುರ್ಬಲವಾಗಿರುತ್ತವೆ. ಮರವು ಹಾಗೂ ದಿಗ್ರ್ಭಮೆಗಳ ತೀಕ್ಷಣತೆ ಕಡಿಮೆ ಇರುತ್ತದೆ. ಯುವಕರು ಹಾಗೂ ವಯಸ್ಕರು ಭಾಷೆಗಳನ್ನು ಕಲಿಯುವುದರಿಂದ ಸಮನಾದ ಲಾಭ ಪಡೆಯುತ್ತಾರೆ. ಮತ್ತು ಒಂದು ಭಾಷೆ ಕಲಿತ ಮೇಲೆ ಮತ್ತೊಂದು ಹೊಸ ಭಾಷೆಯ ಕಲಿಕೆ ಸುಲಭವಾಗುತ್ತದೆ. ನಾವುಗಳು ಆದ್ದರಿಂದ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ನಿಘಂಟನ್ನು ಬಳಸಬೇಕು.