ಪದಗುಚ್ಛ ಪುಸ್ತಕ

ಕಲಿಕೆ ಮತ್ತು ಕಲಿಯುವರ ವರ್ಗಗಳು.

© JackF - Fotolia | Girl packing luggage
ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.