ಪದಗುಚ್ಛ ಪುಸ್ತಕ

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

© Saiarlawka9 | Dreamstime.com
ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ನೆನಪಿಗೆ ಭಾಷೆಯ ಅವಶ್ಯಕತೆ ಇರುತ್ತದೆ.

ಬಹಳ ಜನರಿಗೆ ಶಾಲೆಯಲ್ಲಿನ ತಮ್ಮ ಮೊದಲನೆಯ ದಿನದ ನೆನಪು ಇರುತ್ತದೆ. ಅದಕ್ಕೆ ಮುಂಚೆ ನಡೆದಿದ್ದ ವಿಷಯಗಳು ಜ್ಞಾಪಕದಲ್ಲಿ ಇರುವುದಿಲ್ಲ. ನಮ್ಮ ಜೀವನದ ಮೊದಲ ವರ್ಷದ ನೆನಪುಗಳು ಹೆಚ್ಚು ಕಡಿಮೆ ಇರುವುದೆ ಇಲ್ಲ. ಅದಕ್ಕೆ ಏನು ಕಾರಣ ಇರಬಹುದು? ನಾವು ಮಕ್ಕಳಾಗಿದ್ದಾಗ ಅನುಭವಿಸಿದ್ದನ್ನು ನಮ್ಮ ನೆನಪಿನಲ್ಲಿ ಏಕೆ ಉಳಿದಿರುವುದಿಲ್ಲ? ಇದಕ್ಕೆ ಕಾರಣ ನಮ್ಮ ಬೆಳವಣಿಗೆಯಲ್ಲಿ ಅಡಕವಾಗಿದೆ. ಭಾಷೆ ಮತ್ತು ನೆನಪುಗಳು ಸುಮಾರಾಗಿ ಏಕ ಸಮಯಲ್ಲಿ ಮೂಡುತ್ತದೆ. ಯಾವುದಾದರೂ ಘಟನೆಯ ಬಗ್ಗೆ ನೆನಪು ಮಾಡಿಕೊಳ್ಳಲು ಮನುಷ್ಯನಿಗೆ ಭಾಷೆ ಬೇಕು.. ಅಂದರೆ ಅವನು ಏನನ್ನು ಅನುಭವಿಸುತ್ತಾನೊ ಅದಕ್ಕೆ ತಕ್ಕ ಪದಗಳು ಅವನ ಬಳಿ ಇರಬೇಕು. ವಿಜ್ಞಾನಿಗಳು ಚಿಕ್ಕ ಮಕ್ಕಳೊಂದಿಗೆ ವಿಧ ವಿಧವಾದ ಪ್ರಯೋಗಗಳನ್ನು ನಡೆಸಿದರು. ಆ ಸಂದರ್ಭದಲ್ಲಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಪತ್ತೆಹಚ್ಚಿದರು. ಮಕ್ಕಳು ಮಾತನಾಡಲು ಪ್ರಾರಂಭಿಸಿದ ತಕ್ಷಣವೆ ಹಿಂದಿನ ವಿಷಯಗಳನ್ನೆಲ್ಲಾ ಮರೆತು ಬಿಟ್ಟರು. ಅಂದರೆ ಮಾತಿನ ಪ್ರಾರಂಭ ನೆನಪುಗಳ ಪ್ರಾರಂಭ ಕೂಡ. ಮಕ್ಕಳು ತಮ್ಮ ಜೀವನದ ಮೊದಲ ಮೂರು ವರ್ಷಗಳಲ್ಲಿ ತುಂಬಾ ಕಲಿಯುತ್ತಾರೆ. ಪ್ರತಿ ದಿವಸ ಅವರು ಹೊಸ ವಿಷಯಗಳನ್ನು ಅನುಭವಿಸುತ್ತಾರೆ. ಮತ್ತು ಈ ವಯಸ್ಸಿನಲ್ಲಿ ಅವರು ಬಹಳ ಮುಖ್ಯವಾದ ಅನುಭವಗಳನ್ನು ಪಡೆಯುತ್ತಾರೆ. ಹೀಗಿದ್ದರೂ ಸಹ ಅವುಗಳೆಲ್ಲಾ ಕಳೆದು ಹೋಗುತ್ತವೆ. ಮನೋವಿಜ್ಞಾನಿಗಳು ಇದನ್ನು ಚಿಕ್ಕ ಮಕ್ಕಳ ಮರೆವು ಎಂದು ಕರೆಯುತ್ತಾರೆ. ಕೇವಲ ಆ ವಸ್ತುಗಳು, ಯಾವುದನ್ನು ಮಕ್ಕಳು ಹೆಸರಿಸುತ್ತಾರೊ ಅವು ಮಾತ್ರ ಉಳಿಯುತ್ತವೆ. ವೈಯುಕ್ತಿಕ ಅನುಭವಗಳನ್ನು ಆತ್ಮಚರಿತ್ರೆಯ ನೆನಪುಗಳಲ್ಲಿ ಉಳಿಯುತ್ತವೆ. ಅದು ಒಂದು ದಿನಚರಿಯಂತೆ ಕೆಲಸ ಮಾಡುತ್ತದೆ. ಅದರಲ್ಲಿ ನಮ್ಮ ಜೀವನಕ್ಕೆ ಯಾವುದು ಅಗತ್ಯವೊ ಅವುಗಳು ನೆನಪಿನಲ್ಲಿ ಉಳಿಯುತ್ತವೆ. ಹೇಗೆ ನಮ್ಮ ಆತ್ಮಕಥೆಯ ನೆನಪುಗಳು ರೂಪವಾಗುತ್ತದೆಯೊ ಹಾಗೆಯೆ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಅದರ ಬೆಳವಣಿಗೆ ಮಾತೃಭಾಷೆಯ ಕಲಿಕೆಯನ್ನು ಅವಲಂಬಿಸಿರುತ್ತದೆ. ಮತ್ತು ಕೇವಲ ಭಾಷೆಯ ಮೂಲಕ ಮಾತ್ರ ನಾವು ನಮ್ಮ ನೆನಪುಗಳನ್ನು ಪ್ರಚೋದಿಸಬಹುದು. ನಾವು ಚಿಕ್ಕ ಮಕ್ಕಳಾಗಿದ್ದಾಗ ಅನುಭವಿಸಿದ್ದು ನಿಜವಾಗಿಯು ಕಳೆದು ಹೋಗಿರುವುದಿಲ್ಲ. ಅವುಗಳು ನಮ್ಮ ಮಿದುಳಿನ ಯಾವುದೊ ಒಂದು ಭಾಗದಲ್ಲಿ ಉಳಿದಿರುತ್ತದೆ. ನಮಗೆ ಅದನ್ನು ಕೇವಲ ಜ್ಞಾಪಿಸಿ ಕೊಳ್ಳಲು ಆಗುವುದಿಲ್ಲ.