ಪದಗುಚ್ಛ ಪುಸ್ತಕ

ಭಾಷೆ ಮತ್ತು ಸಂಗೀತ.

ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಭಾಷೆ ಮತ್ತು ಸಂಗೀತ.

ಸಂಗೀತ ಜಗತ್ತಿನಾದ್ಯಂತ ಇರುವ ಒಂದು ಅಪೂರ್ವ ಸಂಗತಿ. ಪ್ರಪಂಚದಲ್ಲಿರುವ ಎಲ್ಲಾ ಜನರು ಸಂಗೀತವನ್ನು ಹೇಳುತ್ತಾರೆ. ಮತ್ತು ಸಂಗೀತವನ್ನು ಎಲ್ಲಾ ಸಂಸ್ಕೃತಿಗಳು ಗ್ರಹಿಸುತ್ತವೆ. ಈ ವಿಷಯವನ್ನು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಇದಕ್ಕಾಗಿ ಇತರರ ಸಂಪರ್ಕ ಇಲ್ಲದಿರುವ ಒಂದು ಜನಾಂಗಕ್ಕೆ ಪಾಶ್ಚಿಮಾತ್ಯ ಸಂಗಿತವನ್ನು ಕೇಳಿಸಲಾಯಿತು. ಈ ಆಫ್ರಿಕಾ ಜನಾಂಗಕ್ಕೆ ಆಧುನಿಕ ಜಗತ್ತಿನ ಜೊತೆ ಯಾವುದೆ ಸಂಬಂಧ ಇರಲಿಲ್ಲ. ಆದರೂ ಸಹ ಸಂತೋಷದ ಮತ್ತು ದುಃಖದ ಸಂಗೀತಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸಿತು. ಅದು ಹೇಗೆ ಸಾಧ್ಯ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಸಂಗೀತ ಎಲ್ಲಾ ಮೇರೆಗಳನ್ನು ಮೀರಿರುವ ಭಾಷೆ ಎಂದು ತೋರುತ್ತದೆ. ಮತ್ತು ನಾವೆಲ್ಲರೂ ಅದರ ಭಾವವನ್ನು ಹೇಗೊ ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಕಲಿತಿದ್ದೇವೆ. ವಿಕಾಸಕ್ಕೆ ಸಂಗೀತದಿಂದ ಯಾವ ಸಹಾಯವೂ ಇಲ್ಲ. ಹೀಗಿದ್ದರೂ ನಮಗೆ ಸಂಗೀತ ಅರ್ಥವಾಗುತ್ತದೆ ಎಂದರೆ , ನಮ್ಮ ಭಾಷೆ ಅದಕ್ಕೆ ಕಾರಣ. ಏಕೆಂದರೆ ಭಾಷೆ ಮತ್ತು ಸಂಗೀತ ಒಂದಕ್ಕೊಂದು ಪೂರಕವಾಗಿದೆ. ನಮ್ಮ ಮಿದುಳಿನಲ್ಲಿ ಇವೆರಡನ್ನು ಒಂದೇ ರೀತಿ ಸಂಸ್ಕರಿಸಲಾಗುತ್ತದೆ. ಹಾಗೆ ಎರಡೂ ಒಂದೆ ರೀತಿ ಕೆಲಸ ಮಾಡುತ್ತವೆ. ಶಬ್ಧ ಮತ್ತು ಧ್ವನಿಗಳು ಎರಡೂ ನಿಗದಿತ ನಿಯಮಗಳಿಗೆ ಅನುಗುಣವಾಗಿ ಜತೆಗೂಡುತ್ತವೆ. ಮಕ್ಕಳು ಶುರುವಿಂದಲೆ ಸಂಗೀತವನ್ನು ಅರ್ಥಮಾಡಿಕೊಳ್ಳುತ್ತಾರೆ, ಏಕೆಂದರೆ ಉದರದಲ್ಲೆ ಕಲಿತಿರುತ್ತಾರೆ. ಅಲ್ಲಿ ಅವರು ತಮ್ಮ ತಾಯಿಯ ಭಾಷೆಯ ಇಂಪನ್ನು ಕೇಳುತ್ತಾರೆ. ನಂತರ ಜನನವಾದ ಮೇಲೆ ಅವರು ಸಂಗೀತವನ್ನು ಗ್ರಹಿಸುತ್ತಾರೆ. ಸಂಗೀತ ಮಾತಿನ ಇಂಪನ್ನು ಅನುಕರಿಸುತ್ತದೆ ಎಂದು ಹೇಳಬಹುದು. ಮನುಷ್ಯ ಭಾವನೆಗಳನ್ನು ಭಾಷೆ ಮತ್ತು ಸಂಗೀತದ ಗತಿಯ ಮೂಲಕ ತೋರ್ಪಡಿಸುತ್ತಾನೆ. ನಮ್ಮ ಭಾಷಾಜ್ಞಾನದ ಮೂಲಕ ನಾವು ಸಂಗೀತದಲ್ಲಿ ಇರುವ ಭಾವಪರವಶತೆಯನ್ನು ಗುರುತಿಸುತ್ತೇವೆ. ಪ್ರತಿಯಾಗಿ ಸಂಗೀತ ಜ್ಞಾನವಿರುವ ಮನುಷ್ಯರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ. ಹೆಚ್ಚಿನ ಸಂಗೀತಗಾರರು ಭಾಷೆಯನ್ನು ಇಂಪಾದ ಸಂಗೀತದಂತೆ ಗುರುತಿಸಿಕೊಳ್ಳುತ್ತಾರೆ. ತನ್ಮೂಲಕ ಭಾಷೆಯನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಾರೆ. ವಿಸ್ಮಯಕರವೆಂದರೆ ಪ್ರಪಂಚದಾದ್ಯಂತ ಲಾಲಿ ಹಾಡುಗಳು ಕೇಳಲು ಒಂದೆ ತರಹ ಇರುತ್ತವೆ. ಇದು ಸಂಗೀತ ಎಷ್ಟು ಅಂತರರಾಷ್ಟ್ರೀಯ ಎನ್ನುವುದನ್ನು ಸಾಬೀತು ಪಡಿಸುತ್ತದೆ. ಹಾಗೂ ಅದು ಎಲ್ಲಾ ಭಾಷೆಗಳಿಗಿಂತ ಸುಮಧುರ....