ಪದಗುಚ್ಛ ಪುಸ್ತಕ

ಭಾಷೆ ಮತ್ತು ಗಣಿತಶಾಸ್ತ್ರ.

ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.