ಪದಗುಚ್ಛ ಪುಸ್ತಕ

ಇಂಡೊನೀಷಿಯ, ಬಹು ಭಾಷೆಗಳ ನಾಡು.

© Dark1elf | Dreamstime.com
ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?