ಪದಗುಚ್ಛ ಪುಸ್ತಕ

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.