ಪದಗುಚ್ಛ ಪುಸ್ತಕ

ಚೈನೀಸ್ ಭಾಷೆ.

ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಚೈನೀಸ್ ಭಾಷೆ.

ಚೈನೀಸ್ ಭಾಷೆ ಪ್ರಪಂಚದಲ್ಲಿ ಅತಿ ಹೆಚ್ಚು ಜನರಿಂದ ಮಾತನಾಡಲ್ಪಡುವ ಭಾಷೆ. ಆದರೆ ಕೇವಲ ಒಂದೆ ಒಂದು ಚೈನೀಸ್ ಭಾಷೆ ಇಲ್ಲ. ಹಲವಾರು ಚೈನೀಸ್ ಭಾಷೆಗಳು ಅಸ್ತಿತ್ವದಲ್ಲಿ ಇವೆ. ಅವುಗಳೆಲ್ಲಾ ಚೈನೀಸ್-ಟಿಬೇಟಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಒಟ್ಟಿನಲ್ಲಿ ಸುಮಾರು ೧೩೦ ಕೋಟಿ ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಇವರಲ್ಲಿ ಅತಿ ಹೆಚ್ಚು ಜನರು ಚೀನಾದಲ್ಲಿ ಮತ್ತು ತೈವಾನ್ ನಲ್ಲಿ ವಾಸಿಸುತ್ತಾರೆ. ಇನ್ನೂ ಹಲವಾರು ದೇಶಗಳಲ್ಲಿ ಚೈನೀಸ್ ಮಾತನಾಡುವವರು ಅಲ್ಪ ಸಂಖ್ಯೆಯಲ್ಲಿ ಇದ್ದಾರೆ. ಇವುಗಳಲ್ಲಿ ಮುಖ್ಯವಾದದ್ದು ಪ್ರಬುದ್ಧ ಚೈನೀಸ್ ಭಾಷೆ ಈ ಪ್ರಮಾಣೀಕೃತ ಭಾಷೆಯನ್ನು ಮಂಡಾರಿನ್ ಎಂದು ಕರೆಯಲಾಗುವುದು. ಮಂಡಾರಿನ್ ಚೀನಾದ ಅಧಿಕೃತ ಭಾಷೆ. ಮಿಕ್ಕ ಚೈನೀಸ್ ಭಾಷೆಗಳನ್ನು ಆಡು ಭಾಷೆಗಳು ಎಂದು ವಿಂಗಡಿಸಲಾಗಿದೆ. ತೈವಾನ್ ಮತ್ತು ಸಿಂಗಪೂರ್ ನಲ್ಲಿ ಸಹ ಮಂಡಾರಿನ್ ಬಳಸಲಾಗುತ್ತದೆ. ಮಂಡಾರಿನ್ ೮೫ ಕೋಟಿ ಚೀನಿಯರ ಮಾತೃಭಾಷೆ. ಅದನ್ನು ಹೆಚ್ಚು ಕಡಿಮೆ ಚೈನೀಸ್ ಮಾತನಾಡುವ ಎಲ್ಲರೂ ಅರ್ಥ ಮಾಡಿಕೊಳ್ಳಬಲ್ಲರು. ವಿವಿಧ ಆಡುಭಾಷೆಗಳನ್ನು ಮಾತಾಡುವವರು ಇತರರನ್ನು ಅರ್ಥ ಮಾಡಿಕೊಳ್ಳಲು ಅದನ್ನು ಬಳಸುತ್ತಾರೆ. ಎಲ್ಲಾ ಚೀನಿಯರು ಒಂದೆ ಲಿಪಿಯನ್ನು ಹೊಂದಿದ್ದಾರೆ. ಚೈನೀಸ್ ಲಿಪಿ ೪೦೦೦ ದಿಂದ ೫೦೦೦ ವರ್ಷಗಳಷ್ಟು ಪುರಾತನವಾದದ್ದು. ಇದರಿಂದ ಚೈನೀಸ್ ಭಾಷೆ ದೀರ್ಘವಾದ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಏಷ್ಯಾದ ಇನ್ನಿತರ ದೇಶಗಳು ಚೈನೀಸ್ ಲಿಪಿಯನ್ನು ಎರವಲು ಪಡೆದಿವೆ. ಚೈನೀಸ್ ನ ಲಿಪಿಸಂಕೇತಗಳು ವರ್ಣಾನುಕ್ರಮಕ್ಕಿಂತ ಕ್ಲಿಷ್ಟವಾದದ್ದು. ಚೈನೀಸ್ ಭಾಷೆ ಮಾತನಾಡಲು ಅಷ್ಟು ಕಷ್ಟಕರವಲ್ಲ. ವ್ಯಾಕರಣವನ್ನು ಸಹ ಹೆಚ್ಚು ಕಡಿಮೆ ಸುಲಭವಾಗಿ ಕಲಿಯಬಹುದು. ಆದ್ದರಿಂದ ಕಲಿಯುವವರು ಶೀಘ್ರವಾಗಿ ಮುನ್ನಡೆ ಸಾಧಿಸಬಹುದು. ಈಗ ಹೆಚ್ಚು ಹೆಚ್ಚು ಜನರು ಚೈನೀಸ್ ಭಾಷೆಯನ್ನು ಕಲಿಯಲು ಬಯಸುತ್ತಾರೆ. ಅದು ಒಂದು ಮುಖ್ಯವಾದ ಪರಭಾಷೆ ಎಂದು ಪ್ರಾಮುಖ್ಯತೆ ಪಡೆಯುತ್ತಿದೆ. ಈ ಮಧ್ಯೆ ಎಲ್ಲೆಡೆ ಚೈನೀಸ್ ಭಾಷಾ ತರಗತಿಗಳನ್ನು ನಡೆಸಲಾಗುತ್ತಿವೆ. ನಿಮ್ಮಲ್ಲಿ ನೀವು ನಂಬಿಕೆ ಇಟ್ಟುಕೊಳ್ಳಿ! ಚೈನೀಸ್ ಭಾಷೆ ಭವಿಷ್ಯತ್ತಿನ ಭಾಷೆಯಾಗಲಿದೆ...