ಪದಗುಚ್ಛ ಪುಸ್ತಕ

ಭಾಷೆಗಳೊಂದಿಗೆ ಅಲ್ಜ್ ಹೈಮರ್ ಖಾಯಿಲೆ ವಿರುದ್ದ.

© Fizkes | Dreamstime.com
ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಭಾಷೆಗಳೊಂದಿಗೆ ಅಲ್ಜ್ ಹೈಮರ್ ಖಾಯಿಲೆ ವಿರುದ್ದ.

ಯಾರು ಬೌದ್ಧಿಕವಾಗಿ ಚುರುಕಾಗಿರಲು ಆಶಿಸುತ್ತಾರೋ ಅವರು ಭಾಷೆಗಳನ್ನು ಕಲಿಯಬೇಕು. ಭಾಷಾಜ್ಞಾನ ಒಬ್ಬರನ್ನು ಚಿತ್ತವೈಕಲ್ಯದಿಂದ ರಕ್ಷಿಸುತ್ತದೆ. ಈ ವಿಷಯವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಕಲಿಯುವವರ ವಯಸ್ಸು ಇದರಲ್ಲಿ ಯಾವ ಪಾತ್ರವನ್ನು ವಹಿಸುವುದಿಲ್ಲ. ಮುಖ್ಯವಾದದ್ದು, ಮಿದುಳನ್ನು ಕ್ರಮಬದ್ಧವಾಗಿ ತರಬೇತಿಗೊಳಿಸುವುದು. (ಹೊಸ) ಪದಗಳನ್ನು ಕಲಿಯುವ ಪ್ರಕ್ರಿಯೆ ಮಿದುಳಿನ ವಿವಿಧ ಭಾಗಗಳನ್ನು ಚುರುಕುಗೊಳಿಸುತ್ತದೆ. ಈ ಭಾಗಗಳು ಅರಿತು ಕಲಿಯುವ ಪ್ರಕ್ರಿಯೆಗಳಿಗೆ ಚಾಲನೆ ನೀಡುತ್ತವೆ. ಬಹು ಭಾಷೆಗಳನ್ನು ಬಲ್ಲವರು ಇದರಿಂದಾಗಿ ಹೆಚ್ಚು ಹುಷಾರಾಗಿರುತ್ತಾರೆ. ಇಷ್ಟಲ್ಲದೆ ಹೆಚ್ಚು ಏಕಾಗ್ರಚಿತ್ತರಾಗಿರುತ್ತಾರೆ. ಬಹು ಭಾಷಾಜ್ಞಾನ ಇನ್ನೂ ಹಲವು ಅನುಕೂಲತೆಗಳನ್ನು ಒದಗಿಸುತ್ತದೆ. ಬಹು ಭಾಷೆಗಳನ್ನು ಬಲ್ಲವರು ಚುರುಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ವೇಗವಾಗಿ ನಿರ್ಣಯಗಳನ್ನು ತಲುಪುತ್ತಾರೆ. ಅದಕ್ಕೆ ಕಾರಣ: ಅವರ ಮಿದುಳು ಶೀಘ್ರವಾಗಿ ಆರಿಸುವುದನ್ನು ಕಲಿತಿರುತ್ತದೆ. ಅದು ಪ್ರತಿಯೊಂದು ವಿಷಯವನ್ನು ಕಡೆಯ ಪಕ್ಷ ಎರಡು ವಿಧವಾಗಿ ನಿರೂಪಿಸಲು ಕಲಿತಿರುತ್ತದೆ. ಇದರಿಂದಾಗಿ ಪ್ರತಿ ನಿರೂಪಣೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಬಹು ಭಾಷೆಗಳನ್ನು ಬಲ್ಲವರು ಹಾಗಾಗಿ ಯಾವಾಗಲು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಬೇಕು. ಅವರ ಮಿದುಳು ಹಲವಾರು ಸಾಧ್ಯತೆಗಳಿಂದ ಒಂದನ್ನು ಆರಿಸುವುದರಲ್ಲಿ ಪಳಗಿರುತ್ತದೆ. ಈ ಅಭ್ಯಾಸಗಳು ಕೇವಲ ಕಲಿಕೆ ಕೇಂದ್ರಗಳನ್ನು ಮಾತ್ರ ಉತ್ತೇಜಿಸುವುದಿಲ್ಲ. ಮಿದುಳಿನ ವಿವಿಧ ಭಾಗಗಳು ಬಹುಭಾಷಾಪರಿಣತೆಯಿಂದ ಪ್ರಯೋಜನ ಪಡೆಯುತ್ತವೆ. ಭಾಷೆಗಳ ಜ್ಞಾನದಿಂದಾಗಿ ಹೆಚ್ಚಾದ ಅರಿವಿನ ಹತೋಟಿ ಇರುತ್ತದೆ. ಭಾಷೆಗಳ ಜ್ಞಾನ ಖಂಡಿತವಾಗಿ ಒಬ್ಬರನ್ನು ಚಿತ್ತವೈಕಲ್ಯದಿಂದ ರಕ್ಷಿಸುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಬಹು ಭಾಷೆಗಳನ್ನು ಬಲ್ಲವರಲ್ಲಿ ಈ ಖಾಯಿಲೆ ನಿಧಾನವಾಗಿ ಉಲ್ಬಣವಾಗುತ್ತದೆ. ಮತ್ತು ಇವರ ಮಿದುಳು ಖಾಯಿಲೆಯ ಪರಿಣಾಮಗಳನ್ನು ಮೇಲಾಗಿ ಸರಿದೂಗಿಸುತ್ತದೆ. ಚಿತ್ತವೈಕಲ್ಯದ ಚಿನ್ಹೆಗಳು ಕಲಿಯುವವರಲ್ಲಿ ದುರ್ಬಲವಾಗಿರುತ್ತವೆ. ಮರವು ಹಾಗೂ ದಿಗ್ರ್ಭಮೆಗಳ ತೀಕ್ಷಣತೆ ಕಡಿಮೆ ಇರುತ್ತದೆ. ಯುವಕರು ಹಾಗೂ ವಯಸ್ಕರು ಭಾಷೆಗಳನ್ನು ಕಲಿಯುವುದರಿಂದ ಸಮನಾದ ಲಾಭ ಪಡೆಯುತ್ತಾರೆ. ಮತ್ತು ಒಂದು ಭಾಷೆ ಕಲಿತ ಮೇಲೆ ಮತ್ತೊಂದು ಹೊಸ ಭಾಷೆಯ ಕಲಿಕೆ ಸುಲಭವಾಗುತ್ತದೆ. ನಾವುಗಳು ಆದ್ದರಿಂದ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ನಿಘಂಟನ್ನು ಬಳಸಬೇಕು.