ಪದಗುಚ್ಛ ಪುಸ್ತಕ

ಭಾಷೆಯಾಗಿ ಚಿನ್ಹೆಗಳು.

ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.