ಪದಗುಚ್ಛ ಪುಸ್ತಕ

ಭಾಷೆಗಳನ್ನು ಅಂತರ್ಜಾಲದಲ್ಲಿ ಕಲಿಯುವುದು.

ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಭಾಷೆಗಳನ್ನು ಅಂತರ್ಜಾಲದಲ್ಲಿ ಕಲಿಯುವುದು.

ಹೆಚ್ಚು ಹೆಚ್ಚು ಜನರು ಪರಭಾಷೆಗಳನ್ನು ಕಲಿಯುತ್ತಿದ್ದಾರೆ. ಅದಕ್ಕಾಗಿ ಹೆಚ್ಚು ಹೆಚ್ಚು ಜನರು ಅಂತರ್ಜಾಲವನ್ನು ಬಳಸುತ್ತಿದ್ದಾರೆ. ನೇರ ಕಲಿಕೆ ಸಂಪ್ರದಾಯಬದ್ಧ ಕಲಿಕೆಗಿಂತ ವಿಭಿನ್ನವಾಗಿರುತ್ತದೆ. ಅದು ಹೆಚ್ಚಿನ ಅನುಕೂಲಗಳನ್ನು ಹೊಂದಿದೆ. ಬಳಕೆದಾರರು ಯಾವಾಗ ಕಲಿಯುವುದು ಎಂಬುದನ್ನು ಸ್ವತಃ ನಿರ್ಧರಿಸಬಹುದು. ಹಾಗೂ ಅವರು ತಮಗೆ ಬೇಕಾದ ವಿಷಯಗಳನ್ನ್ನು ಹುಡುಕಿಕೊಳ್ಳಬಹುದು. ಮತ್ತು ಒಂದು ದಿವಸದಲ್ಲಿ ಎಷ್ಟು ಕಲಿಯಬೇಕು ಎನ್ನುವುದನ್ನು ನಿಷ್ಕರ್ಷಿಸಬಹುದು. ನೇರ ಕಲಿಕೆಯಲ್ಲಿ ಬಳಕೆದಾರ ಅಂತರ್ದೃಷ್ಟಿಯ ಮೂಲಕ ಕಲಿಯಬೇಕು. ಅಂದರೆ ಅವರು ಹೊಸಭಾಷೆಯನ್ನು ಅತ್ಯಂತ ಸಹಜವಾದ ರೀತಿಯಲ್ಲಿ ಕಲಿಯಬೇಕು. ಅಂದರೆ ಅವರು ಚಿಕ್ಕವರಾಗಿದ್ದಾಗ ಅಥವಾ ಪರದೇಶದಲ್ಲಿ ರಜಾದಿನಗಳಲ್ಲಿ ಕಲಿತಂತೆ. ಅದಕ್ಕಾಗಿ ಬಳಕೆದಾರರು ತೋರ್ಕೆಯ ಸಂದರ್ಭಗಳಲ್ಲಿ ಕಲಿಯುತ್ತಾರೆ. ಅವರು ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಗ್ರಹಿಸುತ್ತಾರೆ. ಆ ಸಂದರ್ಭಗಳಲ್ಲಿ ಅವರು ಸ್ವತಃ ಚುರುಕಾಗಬೇಕು. ಹಲವು ಕಾರ್ಯಕ್ರಮಗಳಿಗೆ ನಿಸ್ತಂತು ಗ್ರಾಹಕ ಮತ್ತು ಧ್ವನಿವರ್ಧಕಗಳ ಅವಶ್ಯಕತೆ ಇರುತ್ತದೆ. ಅವುಗಳ ಸಹಾಯದಿಂದ ಒಬ್ಬರು ಮಾತೃಭಾಷಿಗಳೊಡನೆ ಸಂಭಾಷಿಸಬಹುದು. ತಮ್ಮ ಉಚ್ಛಾರಣೆಯನ್ನು ವಿಶ್ಲೇಷಿಸುವ ಅವಕಾಶವೂ ಇರುತ್ತದೆ. ಈ ರೀತಿಯಲ್ಲಿ ಕಲಿಯುವುವರು ತಮ್ಮನ್ನು ಸತತವಾಗಿ ಅಭಿವೃದ್ಧಿ ಪಡಿಸಿಕೊಳ್ಳಬಹುದು. ಅವರು ತಮ್ಮದೆ ಸಮಾಜಗಳಲ್ಲಿ ಬೇರೆ ಸದಸ್ಯರೊಡನೆ ವಿನಿಮಯ ಮಾಡಿಕೊಳ್ಳಬಹುದು. ಅಂತರ್ಜಾಲ ಓಡಾಡುತ್ತಿರುವಾಗ ಕೂಡ ಕಲಿಯುವ ಅವಕಾಶ ಕಲ್ಪಿಸುತ್ತದೆ. ಅಂಕೀಯ ತಂತ್ರಗಳ ಮೂಲಕ ಮನುಷ್ಯ ಭಾಷೆಯನ್ನು ಎಲ್ಲಾ ಕಡೆಗೆ ಜೊತೆಯಲ್ಲಿ ಒಯ್ಯಬಹುದು. ನೇರ ಪಾಠ ಪ್ರವಚನಗಳು ಸಾಂಪ್ರದಾಯಿಕ ಪಾಠ ಪ್ರವಚನಗಳಿಗಿಂತ ಕೀಳಲ್ಲ. ಕಾರ್ಯಕ್ರಮಗಳನ್ನು ಉತ್ತಮವಾಗಿ ರೂಪಿಸಿದ್ದರೆ ಅವು ಅತ್ಯಂತ ಪರಿಣಾಮಕಾರಿಯಾಗಿರುತ್ತವೆ. ಮುಖ್ಯವೆಂದರೆ ನೇರ ತರಗತಿಗಳು ಅತಿ ಹೆಚ್ಚು ಆಡಂಬರವಾಗಿ ಇರಬಾರದು. ಅತಿ ಹೆಚ್ಚಿನ ಉಜ್ಜೀವನ ಕಲಿಕೆಯ ವಸ್ತುವಿನಿಂದ ಗಮನವನ್ನು ಬೇರೆ ಕಡೆಗೆ ತಿರುಗಿಸಬಹುದು. ಮಿದುಳು ಪ್ರತಿಯೊಂದು ಪ್ರಚೋದನೆಯನ್ನು ಪರಿಷ್ಕರಿಸಬೇಕು. ತನ್ಮೂಲಕ ಜ್ಞಾಪಕಶಕ್ತಿ ತುಂಬಾ ಒತ್ತಡಕ್ಕೆ ಒಳಗಾಗಬಹುದು. ಅದ್ದರಿಂದ ಹಲವೊಮ್ಮೆ ಒಂದು ಪುಸ್ತಕದ ಜೊತೆ ಶಾಂತವಾಗಿ ಕಲಿಯುವುದು ಉತ್ತಮ. ಹಳೆಯದರ ಜೊತೆಗೆ ಹೊಸ ವಿಧಾನಗಳನ್ನು ಸೇರಿಸುವವರು ಶೀಘ್ರವಾಗಿ ಮುನ್ನಡೆ ಸಾಧಿಸುತ್ತಾರೆ.