© designer491 - stock.adobe.com | Apple written on papers on a different languages. Language translation concept.

ಪದಗುಚ್ಛ ಪುಸ್ತಕ

ಅಮೇರಿಕಾದ ದೇಶೀಯ ಭಾಷೆಗಳು

© designer491 - stock.adobe.com | Apple written on papers on a different languages. Language translation concept.
ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಅಮೇರಿಕಾದ ದೇಶೀಯ ಭಾಷೆಗಳು

ಅಮೇರಿಕಾದಲ್ಲಿ ವಿವಿಧವಾದ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಉತ್ತರ ಅಮೇರಿಕಾದ ಅತಿ ಮುಖ್ಯ ಭಾಷೆ ಆಂಗ್ಲ ಭಾಷೆ. ದಕ್ಷಿಣ ಅಮೇರಿಕಾದಲ್ಲಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರಬಲವಾಗಿವೆ. ಈ ಎಲ್ಲಾ ಭಾಷೆಗಳು ಯುರೋಪ್ ನಿಂದ ಅಮೇರಿಕಾಗೆ ಬಂದವು. ವಸಾಹತು ಸ್ಥಾಪನೆಗೆ ಮುಂಚೆ ಅಲ್ಲಿ ಬೇರೆ ಭಾಷೆಗಳನ್ನು ಬಳಸಲಾಗುತ್ತಿತ್ತು. ಇವನ್ನು ಅಮೇರಿಕಾದ ದೇಶೀಯ ಭಾಷೆಗಳೆಂದು ಕರೆಯಲಾಗಿದೆ. ಇವುಗಳನ್ನು ಇಲ್ಲಿಯವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಇವುಗಳ ವೈವಿಧ್ಯತೆ ಅಗಾಧವಾದದ್ದು. ಜನರ ಅಂದಾಜಿನ ಮೇರೆಗೆ ಉತ್ತರ ಅಮೇರಿಕಾದಲ್ಲಿ ಸುಮಾರು ೬೦ ಭಾಷಾಕುಟುಂಬಗಳಿವೆ. ದಕ್ಷಿಣ ಅಮೇರಿಕಾದಲ್ಲಿ ಈ ಸಂಖ್ಯೆ ಬಹುಶಃ ೧೫೦ಕ್ಕೂ ಹೆಚ್ಚು ಇರಬಹುದು. ಇವುಗಳ ಜೊತೆಗೆ ಸಂಪರ್ಕವಿಲ್ಲದ ಭಾಷೆಗಳು ಸೇರಿಕೊಳ್ಳಬಹುದು. ಈ ಎಲ್ಲಾ ಭಾಷೆಗಳು ವಿಭಿನ್ನವಾಗಿವೆ. ಅವುಗಳು ಕೇವಲ ಕೆಲವೆ ಸಮಾನ ರಚನೆಗಳನ್ನು ಹೊಂದಿವೆ. ಆದ್ದರಿಂದ ಈ ಭಾಷೆಗಳನ್ನು ವಿಂಗಡಿಸುವುದು ಕಷ್ಟಕರ. ಅವುಗಳು ಅಷ್ಟು ವಿಭಿನ್ನವಾಗಿರುವುದಕ್ಕೆ ಕಾರಣ ಅಮೇರಿಕಾದ ಚರಿತ್ರೆಯಲ್ಲಿ ಅಡಗಿದೆ. ಅಮೇರಿಕಾ ಬೇರೆ ಬೇರೆ ಸಮಯಗಳಲ್ಲಿ ವಸಾಹತಿಗೆ ಒಳಪಟ್ಟಿತು. ಅಮೇರಿಕಾವನ್ನು ಮೊದಲ ಜನರ ಗುಂಪು ೧೦೦೦೦ ವರ್ಷಗಳಿಗೂ ಮುಂಚೆ ಸೇರಿತ್ತು. ಪ್ರತಿಯೊಂದು ಜನಾಂಗವು ತನ್ನ ಭಾಷೆಯನ್ನು ಆ ಖಂಡಕ್ಕೆ ಕೊಂಡೊಯ್ದಿತು. ಈ ದೇಶಿಯ ಭಾಷೆಗಳು ಅತಿ ಹೆಚ್ಚಾಗಿ ಏಷಿಯಾದ ಭಾಷೆಗಳನ್ನು ಹೋಲುತ್ತವೆ. ಅಮೇರಿಕಾದ ಹಳೆಯ ಭಾಷೆಗಳ ಪರಿಸ್ಥಿತಿ ಎಲ್ಲಾ ಕಡೆಯೂ ಒಂದೆ ಆಗಿಲ್ಲ. ಅಮೇರಿಕಾದ ದಕ್ಷಿಣ ಭಾಗದಲ್ಲಿ ಇಂಡಿಯನ್ನರ ಭಾಷೆ ಇನ್ನೂ ಜೀವಂತವಾಗಿವೆ. ಗುವರಾನಿ ಮತ್ತು ಕ್ವೆಚುವಾನಂತಹ ಭಾಷೆಗಳನ್ನು ಲಕ್ಷಾಂತರ ಜನರು ಇನ್ನೂ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಅಮೇರಿಕಾದ ಉತ್ತರದಲ್ಲಿ ಅನೇಕ ಭಾಷೆಗಳು ಹೆಚ್ಚು ಕಡಿಮೆ ನಶಿಸಿಹೋಗಿವೆ. ಉತ್ತರ ಅಮೇರಿಕಾದ ಇಂಡಿಯನ್ನರ ಸಂಸ್ಕೃತಿಯನ್ನು ಬಹಳ ಕಾಲ ದಮನ ಮಾಡಲಾಗಿತ್ತು. ಇದರಿಂದ ಅವರ ಭಾಷೆಗಳೂ ಕಳೆದು ಹೋದವು. ಕಳೆದ ಹಲವು ದಶಕಗಳಿಂದ ಅವುಗಳ ಬಗ್ಗೆ ಆಸಕ್ತಿ ಮತ್ತೆ ಹುಟ್ಟಿಕೊಂಡಿದೆ. ಈ ಭಾಷೆಗಳನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿವೆ. ಇವುಗಳು ಮತ್ತೊಮ್ಮೆ ಭವಿಷ್ಯವನ್ನು ಹೊಂದಿರಬಹುದು....