ಪದಗುಚ್ಛ ಪುಸ್ತಕ

kn ಭಾವನೆಗಳು   »   ro Sentimente

೫೬ [ಐವತ್ತಾರು]

ಭಾವನೆಗಳು

ಭಾವನೆಗಳು

56 [cincizeci şi şase]

Sentimente

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರೊಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಆಸೆ ಇರುವುದು. a a--- c--f a avea chef 0
ನಮಗೆ ಆಸೆ ಇದೆ. No- a--- c---. Noi avem chef. 0
ನಮಗೆ ಆಸೆ ಇಲ್ಲ. No- n- a--- c---. Noi nu avem chef. 0
ಭಯ/ಹೆದರಿಕೆ ಇರುವುದು. a s- t--e a se teme 0
ನನಗೆ ಭಯ/ಹೆದರಿಕೆ ಇದೆ Eu m- t--. Eu mă tem. 0
ನನಗೆ ಭಯ/ಹೆದರಿಕೆ ಇಲ್ಲ. Eu n- m- t--. Eu nu mă tem. 0
ಸಮಯ ಇರುವುದು. a a--- t--p a avea timp 0
ಅವನಿಗೆ ಸಮಯವಿದೆ El a-- t---. El are timp. 0
ಅವನಿಗೆ ಸಮಯವಿಲ್ಲ. El n- a-- t---. El nu are timp. 0
ಬೇಸರ ಆಗುವುದು. a f- l---ş a fi leneş 0
ಅವಳಿಗೆ ಬೇಸರವಾಗಿದೆ Ea e--- l-----. Ea este leneşă. 0
ಅವಳಿಗೆ ಬೇಸರವಾಗಿಲ್ಲ. Ea n- e--- l-----. Ea nu este leneşă. 0
ಹಸಿವು ಆಗುವುದು. a(---) f- f---e a(-ţi) fi foame 0
ನಿಮಗೆ ಹಸಿವಾಗಿದೆಯೆ? Vă e--- f----? Vă este foame? 0
ನಿಮಗೆ ಹಸಿವಾಗಿಲ್ಲವೆ? Nu v- e--- f----? Nu vă este foame? 0
ಬಾಯಾರಿಕೆ ಆಗುವುದು. a(---) f- s--e a(-ţi) fi sete 0
ಅವರಿಗೆ ಬಾಯಾರಿಕೆ ಆಗಿದೆ. Lo- l- e--- s---. Lor le este sete. 0
ಅವರಿಗೆ ಬಾಯಾರಿಕೆ ಆಗಿಲ್ಲ. Lo- n- l- e--- s---. Lor nu le este sete. 0

ಗೋಪ್ಯ ಭಾಷೆಗಳು.

ಭಾಷೆಯ ಮೂಲಕ ನಾವು ನಮ್ಮ ಆಲೋಚನೆ ಮತ್ತು ಭಾವನೆಗಳನ್ನು ಇತರರಿಗೆ ತಿಳಿಸಲು ಬಯಸುತ್ತೇವೆ. ಪರಸ್ಪರ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಭಾಷೆಯ ಆದ್ಯ ಕರ್ತವ್ಯ. ಹಲವು ಬಾರಿ ಮನುಷ್ಯರು ತಮ್ಮನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ಆವಾಗ ಅವರು ಗೋಪ್ಯ ಭಾಷೆಗಳನ್ನು ಕಂಡುಹಿಡಿಯುತ್ತಾರೆ. ಗೋಪ್ಯ ಭಾಷೆಗಳು ಮನುಷ್ಯರನ್ನು ಸಾವಿರಾರು ವರ್ಷಗಳಿಂದ ಆಕರ್ಷಿಸಿವೆ. ಉದಾಹರಣೆಗೆ- ಜೂಲಿಯಸ್ ಸೀಸರ್ ತನ್ನದೆ ಆದ ಒಂದು ಗೋಪ್ಯ ಭಾಷೆಯನ್ನು ಹೊಂದಿದ್ದ. ಅವನು ಸಾಂಕೇತಿಕ ಸಂದೇಶಗಳನ್ನು ತನ್ನ ರಾಜ್ಯದ ವಿವಿಧ ಪ್ರಾಂತ್ಯಗಳಿಗೆ ಕಳುಹಿಸುತ್ತಿದ್ದ. ಅವನ ವೈರಿಗಳು ಗುಪ್ತ ಸುದ್ದಿಗಳನ್ನು ಓದಲಿಕ್ಕೆ ಆಗುತ್ತಿರಲಿಲ್ಲ. ಗೋಪ್ಯ ಭಾಷೆಗಳು ಸಂರಕ್ಷಿತ ಸಂದೇಶಗಳು. ಗೋಪ್ಯ ಭಾಷೆಗಳ ಮೂಲಕ ನಾವು ನಮ್ಮನ್ನು ಇತರರಿಂದ ಬೇರ್ಪಡಿಸಿಕೊಳ್ಳುತ್ತೇವೆ. ನಾವು ಒಂದು ವಿಶಿಷ್ಟ ಗುಂಪಿಗೆ ಸೇರಿದವರು ಎಂದು ತೋರಿಸಿಕೊಳ್ಳುತ್ತೇವೆ. ನಾವು ಗೋಪ್ಯಭಾಷೆಗಳನ್ನು ಏಕೆ ಬಳಸುತ್ತೇವೆ ಎನ್ನುವುದಕ್ಕೆ ಹಲವಾರು ಕಾರಣಗಳಿರುತ್ತವೆ. ಪ್ರೇಮಿಗಳು ಪರಸ್ಪರ ಕಾಲಾನುಕಾಲದಿಂದ ಗುಪ್ತಲಿಪಿಯಲ್ಲಿ ಪತ್ರಗಳನ್ನು ಬರೆಯುತ್ತಿದ್ದರು. ಹಲವು ಖಚಿತ ಕರ್ಮಚಾರಿಗಳ ಗುಂಪುಗಳು ಯಾವಗಲೂ ತಮ್ಮದೆ ಆದ ಗುಪ್ತ ಭಾಷೆ ಹೊಂದಿದ್ದರು. ಮಂತ್ರವಾದಿಗಳು, ಕಳ್ಳರು ಮತ್ತು ವ್ಯಾಪಾರಿಗಳು ತಮ್ಮದೆ ಆದ ಭಾಷೆಗಳನ್ನು ಹೊಂದಿರುತ್ತಾರೆ. ಹೆಚ್ಚಾಗಿ ರಾಜಕೀಯ ಕಾರ್ಯಗಳಿಗಾಗಿ ಗೋಪ್ಯಭಾಷೆಗಳನ್ನು ಬಳಸಲಾಗುವುದು. ಹೆಚ್ಚುಕಡಿಮೆ ಪ್ರತಿಯೊಂದು ಯುದ್ಧದಲ್ಲಿ ಹೊಸ ಗೋಪ್ಯಭಾಷೆಗಳು ಹುಟ್ಟಿಕೊಂಡವು. ಸೈನ್ಯ ಮತ್ತು ಗುಪ್ತಚರ್ಯದಳ ತಮ್ಮದೆ ಆದ ಗೋಪ್ಯಭಾಷಾ ನಿಪುಣರನ್ನು ಹೊಂದಿರುತ್ತವೆ. ಸಂಕೇತಭಾಷೆಯಲ್ಲಿ ಬರೆಯುವ ವಿಜ್ಞಾನಕ್ಕೆ ಗೂಢಬಾಷೆ ಎಂದು ಕರೆಯುತ್ತಾರೆ. ಆಧುನಿಕ ಗುಪ್ತಲಿಪಿಗಳು ಜಟಿಲ ಗಣಿತದ ಸೂತ್ರಗಳನ್ನು ಆಧರಿಸಿರುತ್ತವೆ.. ಇವುಗಳನ್ನು ವಿಸಂಕೇತಿಸುವುದು ಅತಿ ಕಷ್ಟ. ಸಂಕೇತ ಭಾಷೆಗಳನ್ನು ಹೊರತು ಪಡಿಸಿ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಈವಾಗ ಎಲ್ಲೆಡೆ ಸಾಂಕೇತಿಕ ಮಹಿತಿಗಳೊಡನೆ ಕೆಲಸ ಮಾಡಲಾಗುವುದು. ಕ್ರೆಡಿಟ್ ಕಾರ್ಡ್ ಗಳು ಮತ್ತು ವಿ. ಅಂಚೆಗಳು ಎಲ್ಲವು ಸಂಕೇತಗಳೊಡನೆ ಕಾರ್ಯ ನಿರ್ವಹಿಸುತ್ತವೆ. ಹೆಚ್ಚಾಗಿ ಮಕ್ಕಳಿಗೆ ಗುಪ್ತ ಭಾಷೆ ರೋಮಾಂಚನಕಾರಿ ಎನಿಸುತ್ತದೆ. ಅವರಿಗೆ ತಮ್ಮ ಸ್ನೇಹಿತರೊಂದಿಗೆ ಗುಪ್ತ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವುದು ಇಷ್ಟ. ಮಕ್ಕಳ ಬೆಳವಣಿಗೆಗೆ ಗುಪ್ತ ಭಾಷೆಗಳು ನಿಜವಾಗಿಯು ಸಹಾಯಕಾರಿ. ಅವು ಸೃಜನಶೀಲತೆ ಮತ್ತು ಭಾಷೆಯ ಅನುಭವವನ್ನು ವೃದ್ಧಿಪಡಿಸುತ್ತದೆ.