ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   ro Curăţenia în casă

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [optsprezece]

Curăţenia în casă

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರೊಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ As---- e--- s------. Astăzi este sâmbătă. 0
ಇಂದು ನಮಗೆ ಸಮಯವಿದೆ. As---- a--- t---. Astăzi avem timp. 0
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. As---- c------ l-------. Astăzi curăţăm locuinţa. 0
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. Eu c---- b---. Eu curăţ baia. 0
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. So--- m-- s---- m-----. Soţul meu spală maşina. 0
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. Co---- c----- b----------. Copiii curăţă bicicletele. 0
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. Bu---- u-- f------. Bunica udă florile. 0
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. Co---- s----- î- c----- c-------. Copiii strâng în camera copiilor. 0
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. So--- m-- î-- s------ p- b----. Soţul meu îşi strânge pe birou. 0
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, Eu b-- r----- î- m----- d- s-----. Eu bag rufele în maşina de spălat. 0
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. Eu î----- r-----. Eu întind rufele. 0
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. Eu c--- r-----. Eu calc rufele. 0
ಕಿಟಕಿಗಳು ಕೊಳೆಯಾಗಿವೆ. Fe-------- s--- m------. Ferestrele sunt murdare. 0
ನೆಲ ಕೊಳೆಯಾಗಿದೆ. Po----- e--- m------. Podeaua este murdară. 0
ಪಾತ್ರೆಗಳು ಕೊಳೆಯಾಗಿವೆ. Va---- s--- m------. Vasele sunt murdare. 0
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? Ci-- c----- f---------? Cine curăţă ferestrele? 0
ಯಾರು ಧೂಳು ಹೊಡೆಯುತ್ತಾರೆ? Ci-- a----- p-----? Cine aspiră praful? 0
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? Ci-- s---- v-----? Cine spală vasele? 0

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.