ಪದಗುಚ್ಛ ಪುಸ್ತಕ

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

© jackfrog - Fotolia | handsome couple sitting in a car
ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.