ಪದಗುಚ್ಛ ಪುಸ್ತಕ

kn ಅಂಗಡಿಗಳು   »   ku Shops

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [pêncî û sê]

Shops

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕುರ್ದಿಶ್ (ಕುರ್ಮಾಂಜಿ) ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Em l- f---------- w------ d------. Em li firoşgehekî werzîşê digerin. 0
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Em l- g----------- d------. Em li goştfiroşekî digerin. 0
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Em l- d------------- d------. Em li dermanxaneyekê digerin. 0
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. Ji b-- k- e- d------- g----- f------ b------. Ji ber ku em dixwazin gogeke futbolê bikirin. 0
ನಾವು ಸಲಾಮಿ ಕೊಂಡು ಕೊಳ್ಳಬೇಕು. Ji b-- k- e- d------- s---- b------. Ji ber ku em dixwazin salam bikirin. 0
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. Ji b-- k- e- d------- d----- b------. Ji ber ku em dixwazin derman bikirin. 0
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. Ji b- g-------- e- l- f---------- w------ d------. Ji bo gokkirînê em li firoşgeheke werzîşê digerin. 0
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Ji b- s---- k----- e- l- g----------- d------. Ji bo salam kirînê em li goştfiroşekî digerin. 0
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Ji b- d----- k----- e- l- d------------- d------. Ji bo derman kirînê em li dermanxaneyekê digerin. 0
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Ez l- z-------- d------. Ez li zêrkerekî digerim. 0
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Ez l- w--------- d------. Ez li wênekêşekî digerim. 0
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. Ez l- p------------ d------. Ez li pastexaneyekê digerim. 0
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. Ji b-- k- d------- g--------- b------. Ji ber ku dixwazim gustîlkekê bikirim. 0
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. Ji b-- k- l- k----- f------ d--------. Ji ber ku li kirîna fîlmekê difikirim. 0
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. Ji b-- k--- k----- p------ d--------. Ji ber kuli kirîna pasteyê difikirim. 0
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Ji b- k----- g--------- l- z-------- d------. Ji bo kirîna gustîlkekê li zêrkerekî digerim. 0
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Ji b- k----- f------ l- w--------- d------. Ji bo kirîna fîlmekê li wênekêşekî digerim. 0
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. Ji b- k----- p------ l- p------------ d------. Ji bo kirîna pasteyê li pastexaneyekê digerim. 0

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.