ಪದಗುಚ್ಛ ಪುಸ್ತಕ

ಸಂಜ್ಞೆಗಳಿಂದ ಭಾಷೆಗೆ.

ar AR de DE em EM en EN es ES fr FR it IT ja JA pt PT px PX zh ZH af AF be BE bg BG bn BN bs BS ca CA cs CS el EL eo EO et ET fa FA fi FI he HE hr HR hu HU id ID ka KA kk KK kn KN ko KO lt LT lv LV mr MR nl NL nn NN pa PA pl PL ro RO ru RU sk SK sq SQ sr SR sv SV tr TR uk UK vi VI

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...