ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   da På posthuset

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

59 [nioghalvtreds]

På posthuset

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಡ್ಯಾನಿಷ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? Hv-- e- d-- n------- p------? Hvor er det nærmeste posthus? 0
ಅಂಚೆ ಕಛೇರಿ ಇಲ್ಲಿಂದ ದೂರವೆ? Hv-- l---- e- d-- t-- d-- n------- p------? Hvor langt er der til det nærmeste posthus? 0
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? Hv-- e- d-- n------- p--------? Hvor er den nærmeste postkasse? 0
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. Je- h-- b--- f-- e- p-- f--------. Jeg har brug for et par frimærker. 0
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. Ti- e- p------- o- e- b---. Til et postkort og et brev. 0
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? Hv-- k----- p------ t-- A------? Hvad koster portoen til Amerika? 0
ಈ ಪೊಟ್ಟಣದ ತೂಕ ಎಷ್ಟು? Hv-- t--- e- p-----? Hvor tung er pakken? 0
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? Ka- j-- s---- d-- m-- l-------? Kan jeg sende den med luftpost? 0
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? Hv-- l---- v---- d-- i---- d-- a-------? Hvor længe varer det inden den ankommer? 0
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? Hv-- k-- j-- t---------? Hvor kan jeg telefonere? 0
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? Hv-- e- d-- n------- t----------? Hvor er den nærmeste telefonboks? 0
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? Ha- d- t----------? Har du telefonkort? 0
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? Ha- d- e- t---------? Har du en telefonbog? 0
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? Ke---- d- Ø------ l--------? Kender du Østrigs landekode? 0
ಒಂದು ಕ್ಷಣ, ನಾನು ನೋಡುತ್ತೇನೆ. Et ø------- j-- s-- l--- e----. Et øjeblik, jeg ser lige efter. 0
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. Nu------ e- h--- t---- o------. Nummeret er hele tiden optaget. 0
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? Hv----- n----- h-- d- t-----? Hvilket nummer har du tastet? 0
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. Du s--- f---- d---- n--! Du skal først dreje nul! 0

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!