ಪದಗುಚ್ಛ ಪುಸ್ತಕ

ಏನಾದರು ಅವಶ್ಯವಾಗಿ ಮಾಡುವುದು   »   iets moeten doen

೭೨ [ಎಪ್ಪತ್ತೆರಡು]

ಏನಾದರು ಅವಶ್ಯವಾಗಿ ಮಾಡುವುದು

ಏನಾದರು ಅವಶ್ಯವಾಗಿ ಮಾಡುವುದು

72 [tweeënzeventig]

+

iets moeten doen

ಪಠ್ಯವನ್ನು ನೋಡಲು ನೀವು ಪ್ರತಿ ಖಾಲಿ ಮೇಲೆ ಕ್ಲಿಕ್ ಮಾಡಬಹುದು ಅಥವಾ:   

ಕನ್ನಡ ಡಚ್ ಪ್ಲೇ ಮಾಡಿ ಇನ್ನಷ್ಟು
(ಅವಶ್ಯ) ಬೇಕು. mo---n moeten 0 +
ನಾನು ಆ ಕಾಗದವನ್ನು ಕಳುಹಿಸ(ಲೇ)ಬೇಕು. Ik m--- d- b---- v--------. Ik moet de brief versturen. 0 +
ನಾನು ಆ ವಸತಿಗೃಹಕ್ಕೆ ಹಣ ಕೊಡ(ಲೇ)ಬೇಕು. Ik m--- h-- h---- b------. Ik moet het hotel betalen. 0 +
     
ನೀನು ಬೆಳಿಗ್ಗೆ ಬೇಗ ಏಳ(ಲೇ)ಬೇಕು. Je m--- v---- o------. Je moet vroeg opstaan. 0 +
ನೀನು ತುಂಬಾ ಕೆಲಸ ಮಾಡ(ಲೇ)ಬೇಕು. Je m--- v--- w-----. Je moet veel werken. 0 +
ನೀನು ಕಾಲನಿಷ್ಠನಾಗಿರ(ಲೇ)ಬೇಕು. Je m--- s---- z---. Je moet stipt zijn. 0 +
     
ಅವನು ಪೆಟ್ರೋಲ್ ತುಂಬಿಸಿಕೊಳ್ಳಬೇಕು. Hi- m--- t-----. Hij moet tanken. 0 +
ಅವನು ತನ್ನ ಕಾರನ್ನು ರಿಪೇರಿ ಮಾಡಿಕೊಳ್ಳಬೇಕು. Hi- m--- d- a--- r--------. Hij moet de auto repareren. 0 +
ಅವನು ತನ್ನ ಕಾರನ್ನು ತೊಳೆಯಬೇಕು. Hi- m--- d- a--- w-----. Hij moet de auto wassen. 0 +
     
ಅವಳು ಕೊಂಡು ಕೊಳ್ಳಬೇಕು. Zi- m--- i------ d---. Zij moet inkopen doen. 0 +
ಅವಳು ಮನೆಯನ್ನು ಸ್ವಚ್ಚಗೊಳಿಸಬೇಕು. Zi- m--- d- w----- s----------. Zij moet de woning schoonmaken. 0 +
ಅವಳು ಬಟ್ಟೆಗಳನ್ನು ಒಗೆಯಬೇಕು. Zi- m--- d- w-- d---. Zij moet de was doen. 0 +
     
ನಾವು ಈ ಕೂಡಲೆ ಶಾಲೆಗೆ ಹೋಗಬೇಕು Wi- m----- z- m----- n--- s-----. Wij moeten zo meteen naar school. 0 +
ನಾವು ಈ ಕೂಡಲೆ ಕೆಲಸಕ್ಕೆ ಹೋಗಬೇಕು. Wi- m----- z- m----- n--- h-- w---. Wij moeten zo meteen naar het werk. 0 +
ನಾವು ಈ ಕೂಡಲೆ ವೈದ್ಯರ ಬಳಿ ಹೋಗಬೇಕು. Wi- m----- z- m----- n--- d- d-----. Wij moeten zo meteen naar de dokter. 0 +
     
ನೀವು ಬಸ್ ಗೆ ಕಾಯಬೇಕು. Ju---- m----- o- d- b-- w------. Jullie moeten op de bus wachten. 0 +
ನೀವು ರೈಲು ಗಾಡಿಗೆ ಕಾಯಬೇಕು. Ju---- m----- o- d- t---- w------. Jullie moeten op de trein wachten. 0 +
ನೀವು ಟ್ಯಾಕ್ಸಿಗೆ ಕಾಯಬೇಕು. Ju---- m----- o- d- t--- w------. Jullie moeten op de taxi wachten. 0 +
     

ಏಕೆ ಹತ್ತು ಹಲವಾರು ಭಾಷೆಗಳಿವೆ?

ಈಗ ಜಗತ್ತಿನಾದ್ಯಂತ ೬೦೦೦ಕ್ಕೂ ಮಿಗಿಲಾಗಿ ವಿವಿಧ ಭಾಷೆಗಳು ಇವೆ. ಈ ಕಾರಣದಿಂದ ನಮಗೆ ದುಬಾಷಿಗಳ ಮತ್ತು ಭಾಷಾಂತರಕಾರರ ಅವಶ್ಯಕತೆ ಇದೆ. ಬಹಳ ಸಮಯಕ್ಕೆ ಮುಂಚೆ ಎಲ್ಲರೂ ಒಂದೆ ಭಾಷೆಯನ್ನು ಮಾತನಾಡುತ್ತಿದ್ದರು. ಜನರು ವಲಸೆ ಹೋಗಲು ಶುರು ಆದ ಮೇಲೆ ಪರಿಸ್ಥಿತಿ ಬದಲಾಯಿತು. ಅವರು ತಮ್ಮ ತಾಯ್ನಾಡಾದ ಆಫ್ರಿಕಾವನ್ನು ಬಿಟ್ಟು ಜಗತ್ತಿನ ಎಲ್ಲಾ ಕಡೆಗೆ ಹೋಗಲು ಪ್ರಾರಂಬಿಸಿದರು. ವಾಸಸ್ಥಾನಗಳ ಬೇರ್ಪಡೆಯ ಮೂಲಕ ಭಾಷೆಗಳ ಬೇರ್ಪಡೆಯು ಆಯಿತು. ಏಕೆಂದರೆ ಪ್ರತಿಯೊಂದು ಜನಾಂಗವೂ ತನ್ನದೆ ಆದ ಪ್ರವಹನೆಯ ಮಾರ್ಗವನ್ನು ರೂಪಿಸಿ ಕೊಂಡಿತು. ಒಂದು ಸಾಮಾನ್ಯವಾದ ಮೂಲ ಭಾಷೆಯಿಂದ ಹಲವಾರು ವಿವಿಧ ಭಾಷೆಗಳು ಹುಟ್ಟಿಕೊಂಡವು. ಅದರೆ ಜನರು ಯಾವಾಗಲು ಒಂದೆ ಜಾಗದಲ್ಲಿ ಇರುತ್ತಿರಲಿಲ್ಲ. ಇದರ ಮೂಲಕ ಭಾಷೆಗಳು ಒಂದರಿಂದ ಒಂದು ಬೇರೆ ಬೇರೆ ಆದವು. ಯಾವಾಗಲೊ ಒಮ್ಮೆ ಮನುಷ್ಯ ಸಾಮಾನ್ಯವಾದ ಬೇರನ್ನು ಗುರುತಿಸಲಾಗದಂತೆ ಆಯಿತು. ಹಾಗೆಯೆ ಯಾವುದೆ ಒಂದು ಜನಾಂಗ ಸಾವಿರಾರು ವರ್ಷಗಳು ಪ್ರತ್ಯೇಕವಾಗಿ ಇರಲಿಲ್ಲ. ಯಾವಾಗಲೂ ವಿವಿಧ ಜನಾಂಗಗಳ ನಡುವೆ ಸಂಬಂಧಗಳಿದ್ದವು. ಅವು ಭಾಷೆಗಳನ್ನು ಬದಲಾಯಿಸಿದವು. ಅವು ಬೇರೆ ಭಾಷೆಗಳಿಂದ ಧಾತುಗಳನ್ನು ತೆಗೆದುಕೊಂಡವು ಅಥವಾ ಅವುಗಳ ಜೊತೆ ಬೆರೆತವು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆ ಎಂದೂ ಕುಂಠಿತವಾಗಲಿಲ್ಲ. ವಲಸೆ ಹೋಗುವುದು ಮತ್ತು ಪರಸ್ಪರ ಸಂಬಂಧಗಳು ಭಾಷೆಗಳ ವೈವಿಧ್ಯತೆಯನ್ನು ವಿವರಿಸುತ್ತದೆ. ಆದರೆ ಭಾಷೆಗಳಲ್ಲಿ ಹೇಗೆ ಇಷ್ಟು ವೈವಿಧ್ಯತೆ ಇವೆ ಎನ್ನುವುದು ಬೇರೆ ಪ್ರಶ್ನೆ. ಪ್ರತಿಯೊಂದು ಬೆಳವಣಿಗೆಯ ಕಥೆಯು ಖಚಿತವಾದ ನಿಯಮಗಳನ್ನು ಪಾಲಿಸುತ್ತವೆ. ಆದರೆ ಭಾಷೆಗಳು ಯಾವ ರೀತಿಯಲ್ಲಿ ಇವೆ ಎನ್ನುವುದಕ್ಕೆ ಕಾರಣಗಳು ಇರಲೇಬೇಕು. ಬಹಳ ಕಾಲದಿಂದ ವಿಜ್ಞಾನಿಗಳು ಈ ಕಾರಣಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಏಕೆ ಭಾಷೆಗಳು ವಿವಿಧ ರೀತಿಯಲ್ಲಿ ವಿಕಸಿತವಾಗುತ್ತದೆ ಎನ್ನುವುದನ್ನು ತಿಳಿಯಬಯಸುತ್ತಾರೆ. ಅದನ್ನು ಸಂಶೋಧಿಸಲು ಮನುಷ್ಯ ಭಾಷೆಯ ಚರಿತ್ರೆಯನ್ನು ತಿಳಿದಿರಬೇಕಾಗುತ್ತದೆ. ಆವಾಗ ಅವನಿಗೆ, ಏನು, ಯಾವಾಗ ಬದಲಾವಣೆ ಹೊಂದಿತು ಎನ್ನುವುದು ತಿಳಿಯುತ್ತದೆ. ಏನು ಭಾಷೆಯ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಅವನಿಗೆ ಇನ್ನೂ ಗೊತ್ತಿಲ್ಲ. ಜೈವಿಕ ವಿಷಯಗಳಿಗಿಂತ ಸಂಸ್ಕೃತಿಯ ಪ್ರಭಾವಗಳು ಹೆಚ್ಚು ಮುಖ್ಯ ಎನಿಸುತ್ತದೆ. ಅಂದರೆ ಒಂದು ಜನಾಂಗದ ಚರಿತ್ರೆ ಅವರ ಭಾಷೆಯನ್ನು ರೂಪಿಸಿರುತ್ತದೆ. ಭಾಷೆಗಳು ನಾವು ಊಹಿಸುವುದಕ್ಕಿಂತ ಹೆಚ್ಚು ವಿಷಯಗಳನ್ನು ನಮಗೆ ತಿಳಿಸುತ್ತವೆ.