ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   px Conjunções 1

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

94 [noventa e quatro]

Conjunções 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪೋರ್ಚುಗೀಸ್ (BR) ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. Es---- a-- q-- a c---- p---. Espere até que a chuva pare. 0
ನಾನು ತಯಾರಾಗುವವರೆಗೆ ಕಾಯಿ. Es---- a-- e- a-----. Espere até eu acabar. 0
ಅವನು ಹಿಂತಿರುಗಿ ಬರುವವರೆಗೆ ಕಾಯಿ. Es---- a-- e-- v-----. Espere até ele voltar. 0
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. Vo- e------ a-- q-- o- m--- c------ e------ s----. Vou esperar até que os meus cabelos estejam secos. 0
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. Vo- e------ a-- q-- o f---- t---- a------. Vou esperar até que o filme tenha acabado. 0
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. Vo- e------ a-- q-- o s------- f---- v----. Vou esperar até que o semáforo fique verde. 0
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? Qu---- v--- s---- d- f-----? Quando você sairá de férias? 0
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? Ai--- a---- d-- f----- d- v----? Ainda antes das férias do verão? 0
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. Si-- a---- a---- d-- f----- d- v---- c--------. Sim, ainda antes das férias do verão começarem. 0
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. Co------ o t------ a---- q-- c----- o i------. Conserte o telhado antes que comece o inverno. 0
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. La-- a- m--- a---- d- s- s----- à m---. Lave as mãos antes de se sentar à mesa. 0
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. Fe--- a j----- a---- d- s---. Fecha a janela antes de sair. 0
ಮನೆಗೆ ಯಾವಾಗ ಹಿಂದಿರುಗುತ್ತೀಯ? Qu---- v--- v---- p--- c---? Quando você volta para casa? 0
ಪಾಠಗಳ ನಂತರವೇ? De---- d-- a----? Depois das aulas? 0
ಹೌದು, ಪಾಠಗಳು ಮುಗಿದ ನಂತರ. Si-- d----- d-- a---- t---- t--------. Sim, depois das aulas terem terminado. 0
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. De---- d- e-- t-- t--- u- a-------- e-- n-- p--- m--- t--------. Depois de ele ter tido um acidente, ele não pôde mais trabalhar. 0
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. De---- d- t-- p------ o t-------- e-- f-- p--- o- E------ U-----. Depois de ter perdido o trabalho, ele foi para os Estados Unidos. 0
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. De---- d- e-- t-- i-- p--- o- E------ U------ e-- f---- r---. Depois de ele ter ido para os Estados Unidos, ele ficou rico. 0

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.