ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೧   »   ca Passat dels verbs modals 1

೮೭ [ಎಂಬತ್ತೇಳು]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

ಸಹಾಯಕ ಕ್ರಿಯಾಪದಗಳ ಭೂತಕಾಲ ೧

87 [vuitanta-set]

Passat dels verbs modals 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕ್ಯಾಟಲನ್ ಪ್ಲೇ ಮಾಡಿ ಇನ್ನಷ್ಟು
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. Ha---- d- r---- l-- f----. Havíem de regar les flors. 0
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. Ha---- d--------- l-----------. Havíem d’endreçar l’apartament. 0
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. Ha---- d- r----- e-- p----. Havíem de rentar els plats. 0
ನೀವು ಬಿಲ್ ಪಾವತಿಸಬೇಕಾಗಿತ್ತೆ? Va- h---- d- p---- l- f------? Vau haver de pagar la factura? 0
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? Va- h---- d- p---- l--------? Vau haver de pagar l’entrada? 0
ನೀವು ದಂಡವನ್ನು ತೆರಬೇಕಾಗಿತ್ತೆ? Va- h---- d- p---- l- m----? Vau haver de pagar la multa? 0
ಯಾರು ವಿದಾಯ ಹೇಳಬೇಕಾಗಿತ್ತು? Qu- h---- d-------------? Qui havia d’acomiadar-se? 0
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? Qu- h---- d---------- a c--- d-----? Qui havia d’anar-se’n a casa d’hora? 0
ಯಾರು ರೈಲಿಗೆ ಹೋಗಬೇಕಾಗಿತ್ತು? Qu- h---- d- p------ e- t---? Qui havia de prendre el tren? 0
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. No v----- e------- g---- t----. No volíem estar-hi gaire temps. 0
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. No v----- p------ r--. No volíem prendre res. 0
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. No v----- m-------. No volíem molestar. 0
ನಾನು ಫೋನ್ ಮಾಡಲು ಬಯಸಿದ್ದೆ. No--- v---- t-----. Només volia trucar. 0
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . Vo--- e--------- u- t---. Volia encarregar un taxi. 0
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. Me-- v---- a--- a c---. Me’n volia anar a casa. 0
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. Pe----- q-- v----- t----- a l- t--- d---. Pensava que volies trucar a la teva dona. 0
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. Pe----- q-- v----- t----- a I---------. Pensava que volies trucar a Informació. 0
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. Pe----- q-- v----- e--------- u-- p----. Pensava que volies encarregar una pizza. 0

ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.

ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.