ಪದಗುಚ್ಛ ಪುಸ್ತಕ

kn ಷಷ್ಠಿ ವಿಭಕ್ತಿ   »   ca Genitiu

೯೯ [ತೊಂಬತ್ತೊಂಬತ್ತು]

ಷಷ್ಠಿ ವಿಭಕ್ತಿ

ಷಷ್ಠಿ ವಿಭಕ್ತಿ

99 [noranta-nou]

Genitiu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕ್ಯಾಟಲನ್ ಪ್ಲೇ ಮಾಡಿ ಇನ್ನಷ್ಟು
ನನ್ನ ಸ್ನೇಹಿತೆಯ ಬೆಕ್ಕು. el g-- d- l- m--- a---a el gat de la meva amiga 0
ನನ್ನ ಸ್ನೇಹಿತನ ನಾಯಿ. el g-- d-- m-- a--c el gos del meu amic 0
ನನ್ನ ಮಕ್ಕಳ ಆಟಿಕೆಗಳು. le- j------- d--- m--- n--s les joguines dels meus nens 0
ಅದು ನನ್ನ ಸಹೋದ್ಯೋಗಿಯ ಕೋಟು. Aq---- é- l------ d-- m-- c-------. Aquest és l’abric del meu col•lega. 0
ಅದು ನನ್ನ ಸಹೋದ್ಯೋಗಿಯ ಕಾರ್. Aq---- é- e- c---- d-- m-- c-------. Aquest és el cotxe del meu col•lega. 0
ಅದು ನನ್ನ ಸಹೋದ್ಯೋಗಿಯ ಕೆಲಸ. Aq---- é- e- t------ d--- m--- c---------. Aquest és el treball dels meus col•legues. 0
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ. El b--- d- l- c----- s- m--- c-----. El botó de la camisa se m’ha caigut. 0
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ. La c--- d-- g------ n- h- é-. La clau del garatge no hi és. 0
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ. L’--------- d-- c-- é- e--------. L’ordinador del cap és espatllat. 0
ಆ ಹುಡುಗಿಯ ಹೆತ್ತವರು ಯಾರು? Qu- s-- e-- p---- d- l- n---? Qui són els pares de la nena? 0
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು? Co- a----- a l- c--- d--- s--- p----? Com arribo a la casa dels seus pares? 0
ಮನೆ ರಸ್ತೆಯ ಕೊನೆಯಲ್ಲಿದೆ. La c--- é- a- c-- d-- c-----. La casa és al cap del carrer. 0
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು? Co- e- d-- l- c------ d- S-----? Com es diu la capital de Suïssa? 0
ಆ ಪುಸ್ತಕದ ಹೆಸರೇನು? Qu-- é- e- t---- d------- l-----? Quin és el títol d’aquest llibre? 0
ಪಕ್ಕದ ಮನೆಯವರ ಮಕ್ಕಳ ಹೆಸರೇನು? Co- e- d---- e-- n--- d--- v----? Com es diuen els nens dels veïns? 0
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ? Qu-- s-- l-- v------- d--- n---? Quan són les vacances dels nens? 0
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು? Qu---- s-- l-- h---- d- c------- d-- m----? Quines són les hores de consulta del metge? 0
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು? Qu--- s-- e-- h------ d--------- d-- m----? Quins són els horaris d’obertura del museu? 0

ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.

ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ.