ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   em Adjectives 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [seventy-nine]

Adjectives 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆಂಗ್ಲ (US) ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. I a- w------ a b--- d----. I am wearing a blue dress. 0
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. I a- w------ a r-- d----. I am wearing a red dress. 0
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. I a- w------ a g---- d----. I am wearing a green dress. 0
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. I’- b----- a b---- b--. I’m buying a black bag. 0
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. I’- b----- a b---- b--. I’m buying a brown bag. 0
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. I’- b----- a w---- b--. I’m buying a white bag. 0
ನನಗೆ ಒಂದು ಹೊಸ ಗಾಡಿ ಬೇಕು. I n--- a n-- c--. I need a new car. 0
ನನಗೆ ಒಂದು ವೇಗವಾದ ಗಾಡಿ ಬೇಕು. I n--- a f--- c--. I need a fast car. 0
ನನಗೆ ಒಂದು ಹಿತಕರವಾದ ಗಾಡಿ ಬೇಕು. I n--- a c---------- c--. I need a comfortable car. 0
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. An o-- l--- l---- a- t-- t--. An old lady lives at the top. 0
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. A f-- l--- l---- a- t-- t--. A fat lady lives at the top. 0
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. A c------ l--- l---- b----. A curious lady lives below. 0
ನಮ್ಮ ಅತಿಥಿಗಳು ಒಳ್ಳೆಯ ಜನ. Ou- g----- w--- n--- p-----. Our guests were nice people. 0
ನಮ್ಮ ಅತಿಥಿಗಳು ವಿನೀತ ಜನ. Ou- g----- w--- p----- p-----. Our guests were polite people. 0
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. Ou- g----- w--- i---------- p-----. Our guests were interesting people. 0
ನನಗೆ ಮುದ್ದು ಮಕ್ಕಳಿದ್ದಾರೆ. I h--- l----- c-------. I have lovely children. 0
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. Bu- t-- n--------- h--- n------ c-------. But the neighbours have naughty children. 0
ನಿಮ್ಮ ಮಕ್ಕಳು ಒಳ್ಳೆಯವರೆ? Ar- y--- c------- w--- b------? Are your children well behaved? 0

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.