ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   vi Hoa quả / Trái cây và thực phẩm

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [Mười lăm]

Hoa quả / Trái cây và thực phẩm

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ವಿಯೆಟ್ನಾಮಿ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. Tô- c- m-- q-- / t--- d-- đ--. Tôi có một quả / trái dâu đất. 0
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. Tô- c- m-- q-- / t--- k--- v- m-- q-- / t--- d-- h--. Tôi có một quả / trái kiwi và một quả / trái dưa hấu. 0
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. Tô- c- m-- q-- / t--- c-- v- m-- q-- / t--- b---. Tôi có một quả / trái cam và một quả / trái bưởi. 0
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. Tô- c- m-- q-- / t--- t-- v- m-- q-- / t--- x---. Tôi có một quả / trái táo và một quả / trái xoài. 0
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. Tô- c- m-- q-- / t--- c---- v- m-- q-- / t--- d--. Tôi có một quả / trái chuối và một quả / trái dứa. 0
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. Tô- l-- m-- h-- q-- / t--- c-- t---. Tôi làm món hoa quả / trái cây trộn. 0
ನಾನು ಟೋಸ್ಟ್ ತಿನ್ನುತ್ತಿದ್ದೇನೆ. Tô- ă- m-- m---- b--- m-. Tôi ăn một miếng bánh mì. 0
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. Tô- ă- m-- m---- b--- m- v-- b-. Tôi ăn một miếng bánh mì với bơ. 0
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. Tô- ă- m-- m---- b--- m- v-- b- v- m--. Tôi ăn một miếng bánh mì với bơ và mứt. 0
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. Tô- ă- m-- m---- s--- u---. Tôi ăn một miếng săng uých. 0
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. Tô- ă- m-- m---- s--- u--- v-- b- t--- v--. Tôi ăn một miếng săng uých với bơ thực vật. 0
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ Tô- ă- m-- m---- s--- u--- v-- b- t--- v-- v- c- c---. Tôi ăn một miếng săng uých với bơ thực vật và cà chua. 0
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. Ch--- t- c-- b--- m- v- c--. Chúng ta cần bánh mì và cơm. 0
ನಮಗೆ ಮೀನು ಮತ್ತು ಗೋಮಾಂಸ ಬೇಕು. Ch--- t- c-- c- v- t--- b-- t--. Chúng ta cần cá và thịt bít tết. 0
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. Ch--- t- c-- b--- P---- v- m- S--------. Chúng ta cần bánh Pizza và mì Spaghetti. 0
ನಮಗೆ ಇನ್ನೂ ಏನು ಬೇಕು? Ch--- t- c-- c-- g- n--? Chúng ta còn cần gì nữa? 0
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. Ch--- t- c-- c- r-- v- c- c--- c-- m-- x--. Chúng ta cần cà rốt và cà chua cho món xúp. 0
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? Ở đ-- c- s--- t--? Ở đâu có siêu thị? 0

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.