ಪದಗುಚ್ಛ ಪುಸ್ತಕ

kn ಋತುಗಳು ಮತ್ತು ಹವಾಮಾನ   »   es Las Estaciones y el Clima

೧೬ [ಹದಿನಾರು]

ಋತುಗಳು ಮತ್ತು ಹವಾಮಾನ

ಋತುಗಳು ಮತ್ತು ಹವಾಮಾನ

16 [dieciséis]

Las Estaciones y el Clima

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸ್ಪ್ಯಾನಿಷ್ ಪ್ಲೇ ಮಾಡಿ ಇನ್ನಷ್ಟು
ಇವು ಋತುಗಳು. És--- s-- l-- e--------- d-- a--: Éstas son las estaciones del año:
ವಸಂತ ಋತು ಮತ್ತು ಬೇಸಿಗೆಕಾಲ. La p--------- e- v-----, La primavera, el verano,
ಶರದ್ಋತು ಮತ್ತು ಚಳಿಗಾಲ el o---- y e- i-------. el otoño y el invierno.
.ಬೇಸಿಗೆ ಕಾಲ ಬೆಚ್ಚಗೆ ಇರುತ್ತದೆ. El v----- e- c-------. El verano es caluroso.
ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ. En v----- h--- s--. En verano hace sol.
ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ. En e- v----- n-- g---- i- a p-----. En el verano nos gusta ir a pasear.
ಚಳಿಗಾಲದಲ್ಲಿ ಚಳಿ ಇರುತ್ತದೆ. El i------- e- f---. El invierno es frío.
ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ. En e- i------- n---- o l-----. En el invierno nieva o llueve.
ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ. En e- i------- n-- g---- q-------- e- c---. En el invierno nos gusta quedarnos en casa.
ಚಳಿ ಆಗುತ್ತಿದೆ. Ha-- f---. Hace frío.
ಮಳೆ ಬರುತ್ತಿದೆ. Es-- l--------. Está lloviendo.
ಗಾಳಿ ಬೀಸುತ್ತಿದೆ. Ha-- v----- / E--- v------ (a-.). Hace viento / Está ventoso (am.).
ಸೆಖೆ ಆಗುತ್ತಿದೆ. Ha-- c----. Hace calor.
ಸೂರ್ಯ ಪ್ರಕಾಶಿಸುತ್ತಿದ್ದಾನೆ. Ha-- s--. Hace sol.
ಹವಾಮಾನ ಹಿತಕರವಾಗಿದೆ. El t----- e--- a--------. El tiempo está agradable.
ಇಂದು ಹವಾಮಾನ ಹೇಗಿದೆ? ¿Q-- t----- h--- h--? ¿Qué tiempo hace hoy?
ಇಂದು ಚಳಿಯಾಗಿದೆ. Ho- h--- f---. Hoy hace frío.
ಇಂದು ಸೆಖೆಯಾಗಿದೆ Ho- h--- c----. Hoy hace calor.

ಕಲಿಕೆ ಮತ್ತು ಭಾವನೆಗಳು.

ನಾವು ಒಂದು ಪರಭಾಷೆಯಲ್ಲಿ ಸಂಭಾಷಿಸಲು ಶಕ್ತರಾದರೆ ನಮಗೆ ಸಂತೋಷವಾಗುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಕಲಿಕೆಯ ಪ್ರಗತಿ ಬಗ್ಗೆ ಹೆಮ್ಮೆ ಪಡುತ್ತೇವೆ. ಅದರ ಬದಲು ನಾವು ಸಫಲರಾಗದಿದ್ದರೆ ಕೋಪ ಮಾಡಿಕೊಳ್ಳುತ್ತೇವೆ ಅಥವಾ ನಿರಾಶರಾಗುತ್ತೇವೆ. ಕಲಿಕೆಯೊಡನೆ ಹಾಗಾಗಿ ಹಲವಾರು ಭಾವನೆಗಳು ಸೇರಿಕೊಂಡಿರುತ್ತವೆ. ಹೊಸ ಅಧ್ಯಯನಗಳು ಇನ್ನೂ ಹಲವಾರು ಸ್ವಾರಸ್ಯಕರ ತೀರ್ಮಾನಗಳಿಗೆ ಬಂದಿವೆ. ಇವು ಕಲಿಯುವಾಗ ಭಾವನೆಗಳು ಒಂದು ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತೋರಿಸುತ್ತವೆ. ಏಕೆಂದರೆ ನಮ್ಮ ಭಾವಗಳು ನಮ್ಮ ಕಲಿಕೆಯ ಸಾಫಲ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಮಿದುಳಿಗೆ ಕಲಿಯುವುದು ಒಂದು ಸಮಸ್ಯೆ. ಈ ಸಮಸ್ಯೆಯನ್ನು ಬಿಡಿಸಲು ಅದು ಇಷ್ಟಪಡುತ್ತದೆ. ಅದು ಫಲಕಾರಿಯಾಗತ್ತದೆಯೆ? ಎನ್ನುವುದು ನಮ್ಮ ಬಾವನೆಗಳನ್ನು ಅವಲಂಬಿಸುತ್ತದೆ. ನಾವು ಈ ಸಮಸ್ಯೆಯನ್ನು ಬಿಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮಗೆ ಇದೆ ಎಂದು ಯೋಚಿಸೋಣ. ಈ ಭಾವ ಸ್ಥಿರತೆ ನಮಗೆ ಕಲಿಯುವುದರಲ್ಲಿ ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ನಮ್ಮ ಬೌದ್ಧಿಕಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡದಲ್ಲಿ ಕಲಿಯುವುದು ಇದಕ್ಕೆ ವಿರುದ್ಧವಾಗಿ ವಿಫಲವಾಗುತ್ತದೆ. ಅನುಮಾನ ಅಥವಾ ಚಿಂತೆಗಳು ಒಳ್ಳೆ ಫಲಿತಾಂಶಗಳಿಗೆ ಅಡ್ಡಿ ಒಡ್ಡುತ್ತವೆ. ನಮಗೆ ಆತಂಕ ಇದ್ದರೆ ನಾವು ಹೆಚ್ಚು ಕೆಟ್ಟದಾಗಿ ಕಲಿಯುತ್ತೇವೆ. ಆವಾಗ ನಮ್ಮ ಮಿದುಳು ಹೊಸ ವಿಷಯಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದ್ದರಿಂದ ನಾವು ಕಲಿಯುವಾಗಲೆಲ್ಲ ಹುರುಪು ಹೊಂದಿರಬೇಕು. ಭಾವನೆಗಳು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆಯೆ ಸಹ ಕಲಿಕೆ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ವಾಸ್ತವತೆಯನ್ನು ಪರಿಷ್ಕರಿಸುವ ಮಿದುಳಿನ ಭಾಗ ನಮ್ಮ ಭಾವನೆಗಳನ್ನು ಸಹ ಪರಿಷ್ಕರಿಸುತ್ತದೆ. ಆದ್ದರಿಂದ ಕಲಿಕೆ ಸಂತೋಷ ಕೊಡುತ್ತದೆ, ಮತ್ತು ಸಂತೋಷವಾಗಿರುವವರು ಚೆನ್ನಾಗಿ ಕಲಿಯುತ್ತಾರೆ. ಸಹಜವಾಗಿ ಕಲಿಕೆ ಯಾವಾಗಲೂ ಸಂತಸ ತರುವುದಿಲ್ಲ, ಕಷ್ಟಕರವಾಗಿ ಇರುವ ಸಾಧ್ಯತೆಯೂ ಇದೆ. ಆದ್ದರಿಂದಾಗಿ ನಾವು ಯಾವಾಗಲು ಸಾಮಾನ್ಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಿದಲ್ಲಿ ನಾವು ನಮ್ಮ ಮಿದುಳನ್ನು ಒತ್ತಡಕ್ಕೆ ಗುರಿಪಡಿಸುವುದಿಲ್ಲ. ನಮಗೆ ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ ಎಂಬುದನ್ನು ಖಚಿತವಾಗಿ ಹೇಳುತ್ತೇವೆ. ನಮ್ಮ ಕಾರ್ಯಸಿದ್ದಿಯೆ ನಮ್ಮ ಪ್ರತಿಫಲ, ಅದುವೆ ನಮ್ಮನ್ನು ಹುರಿದುಂಬಿಸುತ್ತದೆ. ಆದ್ದರಿಂದ ಕಲಿಯಿರಿ, ಅದರೊಂದಿಗೆ ನಲಿಯಿರಿ.