ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   en Possessive pronouns 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [sixty-seven]

Possessive pronouns 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆಂಗ್ಲ (UK) ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. the--la---s t__ g______ t-e g-a-s-s ----------- the glasses 0
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. He h----o--o---- h-- -l-----. H_ h__ f________ h__ g_______ H- h-s f-r-o-t-n h-s g-a-s-s- ----------------------------- He has forgotten his glasses. 0
ಅವನ ಕನ್ನಡಕ ಎಲ್ಲಿದೆ? W-e-e-----h----ft--i- ----s--? W____ h__ h_ l___ h__ g_______ W-e-e h-s h- l-f- h-s g-a-s-s- ------------------------------ Where has he left his glasses? 0
ಗಡಿಯಾರ. th-----ck t__ c____ t-e c-o-k --------- the clock 0
ಅವನ ಗಡಿಯಾರ ಕೆಟ್ಟಿದೆ. H-s -lo-- i--’- -o-ki--. H__ c____ i____ w_______ H-s c-o-k i-n-t w-r-i-g- ------------------------ His clock isn’t working. 0
ಗಡಿಯಾರ ಗೋಡೆಯ ಮೇಲೆ ಇದೆ. The-clock han-s-o--the-w-ll. T__ c____ h____ o_ t__ w____ T-e c-o-k h-n-s o- t-e w-l-. ---------------------------- The clock hangs on the wall. 0
ಪಾಸ್ ಪೋರ್ಟ್ t-e --ssport t__ p_______ t-e p-s-p-r- ------------ the passport 0
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. He-h-- -ost-h-s--a-s--rt. H_ h__ l___ h__ p________ H- h-s l-s- h-s p-s-p-r-. ------------------------- He has lost his passport. 0
ಅವನ ಪಾಸ್ ಪೋರ್ಟ್ ಎಲ್ಲಿದೆ? W-ere is -i- p-s-p-r---h--? W____ i_ h__ p_______ t____ W-e-e i- h-s p-s-p-r- t-e-? --------------------------- Where is his passport then? 0
ಅವರು – ಅವರ t-e------eir t___ – t____ t-e- – t-e-r ------------ they – their 0
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. The--hi--ren -a--o------ t---r p--en--. T__ c_______ c_____ f___ t____ p_______ T-e c-i-d-e- c-n-o- f-n- t-e-r p-r-n-s- --------------------------------------- The children cannot find their parents. 0
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. H-r---om---h--r -a-ents! H___ c___ t____ p_______ H-r- c-m- t-e-r p-r-n-s- ------------------------ Here come their parents! 0
ನೀವು - ನಿಮ್ಮ. you - y-ur y__ – y___ y-u – y-u- ---------- you – your 0
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? How w-s -our t--p,-M-- ---l--? H__ w__ y___ t____ M__ M______ H-w w-s y-u- t-i-, M-. M-l-e-? ------------------------------ How was your trip, Mr. Miller? 0
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? W---e-i--y--------,--r.---l--r? W____ i_ y___ w____ M__ M______ W-e-e i- y-u- w-f-, M-. M-l-e-? ------------------------------- Where is your wife, Mr. Miller? 0
ನೀವು - ನಿಮ್ಮ. you-– ---r y__ – y___ y-u – y-u- ---------- you – your 0
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? How w-s-y-ur t-ip- --s.-Sm---? H__ w__ y___ t____ M___ S_____ H-w w-s y-u- t-i-, M-s- S-i-h- ------------------------------ How was your trip, Mrs. Smith? 0
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? W---- ---y--r -u-band--Mrs- Sm-t-? W____ i_ y___ h_______ M___ S_____ W-e-e i- y-u- h-s-a-d- M-s- S-i-h- ---------------------------------- Where is your husband, Mrs. Smith? 0

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.