ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   cs žádat o něco

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [sedmdesát čtyři]

žádat o něco

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜೆಕ್ ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? Můž--e m- ostř---t-vl-s-? M_____ m_ o_______ v_____ M-ž-t- m- o-t-í-a- v-a-y- ------------------------- Můžete mi ostříhat vlasy? 0
ಆದರೆ ತುಂಬ ಚಿಕ್ಕದಾಗಿ ಬೇಡ. N- --- -a--á-k-- pr----. N_ m__ n________ p______ N- m-c n-k-á-k-, p-o-í-. ------------------------ Ne moc nakrátko, prosím. 0
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. O--ě-o-------,-pro---. O n___ k______ p______ O n-c- k-a-š-, p-o-í-. ---------------------- O něco kratší, prosím. 0
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? M--ete-mi vy-o--t f-tky? M_____ m_ v______ f_____ M-ž-t- m- v-v-l-t f-t-y- ------------------------ Můžete mi vyvolat fotky? 0
ಚಿತ್ರಗಳು ಸಿ ಡಿಯಲ್ಲಿ ಇವೆ. Fo-k- -sou----c--é---. F____ j___ n_ c_______ F-t-y j-o- n- c-d-č-u- ---------------------- Fotky jsou na cédéčku. 0
ಚಿತ್ರಗಳು ಕ್ಯಾಮರದಲ್ಲಿ ಇವೆ. Fotky -so- -e-f--á--. F____ j___ v_ f______ F-t-y j-o- v- f-ť-k-. --------------------- Fotky jsou ve foťáku. 0
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? Mů---e-o--avit ty h-d-nky? M_____ o______ t_ h_______ M-ž-t- o-r-v-t t- h-d-n-y- -------------------------- Můžete opravit ty hodinky? 0
ಗಾಜು ಒಡೆದು ಹೋಗಿದೆ. S-l-č-o--e-r--b-t-. S______ j_ r_______ S-l-č-o j- r-z-i-é- ------------------- Sklíčko je rozbité. 0
ಬ್ಯಾಟರಿ ಖಾಲಿಯಾಗಿದೆ. Bat---e--- --ázd--. B______ j_ p_______ B-t-r-e j- p-á-d-á- ------------------- Baterie je prázdná. 0
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? Mů---e-vy-ehlit-tu--o--li? M_____ v_______ t_ k______ M-ž-t- v-ž-h-i- t- k-š-l-? -------------------------- Můžete vyžehlit tu košili? 0
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? Mů-ete --či---t t- --lho--? M_____ v_______ t_ k_______ M-ž-t- v-č-s-i- t- k-l-o-y- --------------------------- Můžete vyčistit ty kalhoty? 0
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? M---t- --ra-i- -----t-? M_____ o______ t_ b____ M-ž-t- o-r-v-t t- b-t-? ----------------------- Můžete opravit ty boty? 0
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? Můž--e -- při--l--? M_____ m_ p________ M-ž-t- m- p-i-á-i-? ------------------- Můžete mi připálit? 0
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? Mát---ápalk------ ----l--a-? M___ z______ n___ z_________ M-t- z-p-l-y n-b- z-p-l-v-č- ---------------------------- Máte zápalky nebo zapalovač? 0
ನಿಮ್ಮ ಬಳಿ ಆಷ್ ಟ್ರೇ ಇದೆಯೆ? Mů--t--mi-př-n-s--p---ln--? M_____ m_ p______ p________ M-ž-t- m- p-i-é-t p-p-l-í-? --------------------------- Můžete mi přinést popelník? 0
ನೀವು ಚುಟ್ಟಾ ಸೇದುತ್ತೀರಾ? K-u-íte d---níky? K______ d________ K-u-í-e d-u-n-k-? ----------------- Kouříte doutníky? 0
ನೀವು ಸಿಗರೇಟ್ ಸೇದುತ್ತೀರಾ? Ko--íte c-g----y? K______ c________ K-u-í-e c-g-r-t-? ----------------- Kouříte cigarety? 0
ನೀವು ಪೈಪ್ ಸೇದುತ್ತೀರಾ? K-u-í-- dýmku? K______ d_____ K-u-í-e d-m-u- -------------- Kouříte dýmku? 0

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.