ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   cs V restauraci 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [třicet dva]

V restauraci 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜೆಕ್ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). Je---- h------- s k------. Jednou hranolky s kečupem. 0
ಮಯೊನೇಸ್ ಜೊತೆ ಎರಡು (ಕೊಡಿ). A d------ s m--------. A dvakrát s majonézou. 0
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). A t------ p---- s h------. A třikrát párek s hořčicí. 0
ಯಾವ ಯಾವ ತರಕಾರಿಗಳಿವೆ? Ja--- m--- z-------? Jakou máte zeleninu? 0
ಹುರಳಿಕಾಯಿ ಇದೆಯೆ? Má-- f-----? Máte fazole? 0
ಹೂ ಕೋಸು ಇದೆಯೆ? Má-- k-----? Máte květák? 0
ನನಗೆ ಜೋಳ ತಿನ್ನುವುದು ಇಷ್ಟ. Má- r-- / r--- k-------. Mám rád / ráda kukuřici. 0
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. Má- r-- / r--- o-----. Mám rád / ráda okurky. 0
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. Má- r-- / r--- r------. Mám rád / ráda rajčata. 0
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? Má-- t--- r-- / r--- p----? Máte také rád / ráda pórek? 0
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? Má-- t--- r-- / r--- k----- z---? Máte také rád / ráda kyselé zelí? 0
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? Má-- t--- r-- / r--- č----? Máte také rád / ráda čočku? 0
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? Má- t--- r-- / r--- m----? Máš také rád / ráda mrkev? 0
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? Má- t--- r-- / r--- b--------? Máš také rád / ráda brokolici? 0
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? Má- t--- r-- / r--- p------? Máš také rád / ráda papriku? 0
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. Ne--- r-- c-----. Nemám rád cibuli. 0
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. Ne--- r-- o----. Nemám rád olivy. 0
ನನಗೆ ಅಣಬೆ ಎಂದರೆ ಇಷ್ಟವಿಲ್ಲ. Ne--- r-- h----. Nemám rád houby. 0

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.