ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   tr Alışveriş merkezinde

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [elli iki]

Alışveriş merkezinde

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟರ್ಕಿಷ್ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? Bi- a-------- m-------- g------ m-? Bir alışveriş merkezine gidelim mi? 0
ನಾನು ಸಾಮಾನುಗಳನ್ನು ಕೊಳ್ಳಬೇಕು. Al------- y----- l----. Alışveriş yapmam lazım. 0
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. Ço- ş-- s---- a---- i--------. Çok şey satın almak istiyorum. 0
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? Bü-- m---------- n- t------? Büro malzemeleri ne tarafta? 0
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. Me---- z---- v- k------- i-------- v--. Mektup zarfı ve kâğıdına ihtiyacım var. 0
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. Tü------ v- k----- k------- l----. Tükenmez ve keçeli kalemler lazım. 0
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? Mo-------- n-----? Mobilyalar nerede? 0
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. Bi- d---- v- k------- i-------- v--. Bir dolap ve komodine ihtiyacım var. 0
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. Ya-- m----- v- r--- i-------- v--. Yazı masası ve rafa ihtiyacım var. 0
ಆಟದ ಸಾಮಾನುಗಳು ಎಲ್ಲಿವೆ? Oy-------- n- t------? Oyuncaklar ne tarafta? 0
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. Bi- b---- v- o------ a---- i-------- v--. Bir bebek ve oyuncak ayıya ihtiyacım var. 0
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. Bi- f----- t--- v- s------ t------- i-------- v--. Bir futbol topu ve satranç takımına ihtiyacım var. 0
ಸಲಕರಣೆಗಳು ಎಲ್ಲಿವೆ? Al----- n- t------? Aletler ne tarafta? 0
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. Bi- ç---- v- k-------- i-------- v--. Bir çekiç ve kerpetene ihtiyacım var. 0
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. Bi- m----- v- t---------- i-------- v--. Bir matkap ve tornavidaya ihtiyacım var. 0
ಆಭರಣಗಳ ವಿಭಾಗ ಎಲ್ಲಿದೆ? Mü-------- n-----? Mücevherat nerede? 0
ನನಗೆ ಒಂದು ಸರ ಮತ್ತು ಕೈ ಕಡ ಬೇಕು. Bi- z----- v- b------- i-------- v--. Bir zincir ve bileziğe ihtiyacım var. 0
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. Bi- y---- v- k------- i-------- v--. Bir yüzük ve küpelere ihtiyacım var. 0

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.