ಪದಗುಚ್ಛ ಪುಸ್ತಕ

kn ದೊಡ್ಡ – ಚಿಕ್ಕ   »   et suur – väike

೬೮ [ಅರವತ್ತೆಂಟು]

ದೊಡ್ಡ – ಚಿಕ್ಕ

ದೊಡ್ಡ – ಚಿಕ್ಕ

68 [kuuskümmend kaheksa]

suur – väike

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಎಸ್ಟೋನಿಯನ್ ಪ್ಲೇ ಮಾಡಿ ಇನ್ನಷ್ಟು
ದೊಡ್ಡದು ಮತ್ತು ಚಿಕ್ಕದು. su-- j- v---e suur ja väike 0
ಆನೆ ದೊಡ್ಡದು. El----- o- s---. Elevant on suur. 0
ಇಲಿ ಚಿಕ್ಕದು. Hi-- o- v----. Hiir on väike. 0
ಕತ್ತಲೆ ಮತ್ತು ಬೆಳಕು. pi-- j- v---e pime ja valge 0
ರಾತ್ರಿ ಕತ್ತಲೆಯಾಗಿರುತ್ತದೆ Öö o- p---. Öö on pime. 0
ಬೆಳಗ್ಗೆ ಬೆಳಕಾಗಿರುತ್ತದೆ. Pä-- o- v----. Päev on valge. 0
ಹಿರಿಯ - ಕಿರಿಯ (ಎಳೆಯ) va-- j- n--r vana ja noor 0
ನಮ್ಮ ತಾತನವರಿಗೆ ಈಗ ತುಂಬಾ ವಯಸ್ಸಾಗಿದೆ. Me-- v------ o- v--- v---. Meie vanaisa on väga vana. 0
ಎಪ್ಪತ್ತು ವರ್ಷಗಳ ಮುಂಚೆ ಅವರು ಕಿರಿಯರಾಗಿದ್ದರು. 70 a----- t----- o-- t- v--- n---. 70 aastat tagasi oli ta veel noor. 0
ಸುಂದರ – ಮತ್ತು ವಿಕಾರ (ಕುರೂಪ) il-- j- i---u ilus ja inetu 0
ಚಿಟ್ಟೆ ಸುಂದರವಾಗಿದೆ. Li------ o- i---. Liblikas on ilus. 0
ಜೇಡ ವಿಕಾರವಾಗಿದೆ. Äm---- o- i----. Ämblik on inetu. 0
ದಪ್ಪ ಮತ್ತು ಸಣ್ಣ. pa-- j- k--n paks ja kõhn 0
ನೂರು ಕಿಲೊ ತೂಕದ ಹೆಂಗಸು ದಪ್ಪ. 100 k--- k----- n---- o- p---. 100 kilo kaaluv naine on paks. 0
ಐವತ್ತು ಕಿಲೊ ತೂಕದ ಗಂಡಸು ಸಣ್ಣ. 50 k--- k----- m--- o- k---. 50 kilo kaaluv mees on kõhn. 0
ದುಬಾರಿ ಮತ್ತು ಅಗ್ಗ. ka---- j- o--v kallis ja odav 0
ಈ ಕಾರ್ ದುಬಾರಿ. Au-- o- k-----. Auto on kallis. 0
ಈ ದಿನಪತ್ರಿಕೆ ಅಗ್ಗ. Aj----- o- o---. Ajaleht on odav. 0

ಸಂಕೇತ ಬದಲಾವಣೆ.

ಎರಡು ಭಾಷೆಗಳೊಡನೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತ ಇದೆ. ಅವರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲರು. ಅವರಲ್ಲಿ ಅನೇಕರು ಆಗಿಂದಾಗೆ ಭಾಷೆಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಪರಿಸ್ಥಿತಿಯನ್ನು ಅವಲಂಬಿಸಿ ಯಾವ ಭಾಷೆಯನ್ನು ಉಪಯೋಗಿಸಬೇಕು ಎಂದು ನಿರ್ಧರಿಸುತ್ತಾರೆ. ಉದಾಹರಣೆಗೆ ಅವರು ಕಾರ್ಯಸ್ಥಾನದಲ್ಲಿ ಮನೆಭಾಷೆಯಿಂದ ವಿಭಿನ್ನವಾದ ಭಾಷೆಯನ್ನು ಬಳಸುತ್ತಾರೆ. ಹೀಗೆ ಅವರು ತಮ್ಮ ಪರಿಸರಕ್ಕೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಆದರೆ ಭಾಷೆಯನ್ನು ಸ್ವಪ್ರೇರಣೆಯಿಂದ ಬದಲಾಯಿಸಲು ಅವಕಾಶಗಳು ಇರುತ್ತವೆ. ಈ ವಿದ್ಯಮಾನವನ್ನು ಸಂಕೇತ ಬದಲಾವಣೆ ಎಂದು ಕರೆಯುತ್ತಾರೆ. ಸಂಕೇತ ಬದಲಾವಣೆಯಲ್ಲಿ ಮಾತನಾಡುವ ಸಮಯದಲ್ಲೇ ಭಾಷೆಯನ್ನು ಬದಲಾಯಿಸಲಾಗುತ್ತದೆ. ಏಕೆ ಮಾತನಾಡುವವರು ಭಾಷೆಯನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಅನೇಕ ಕಾರಣಗಳಿರುತ್ತವೆ. ಹಲವು ಬಾರಿ ಒಂದು ಭಾಷೆಯಲ್ಲಿ ಮಾತನಾಡುವವರಿಗೆ ಸರಿಯಾದ ಪದ ದೊರಕುವುದಿಲ್ಲ. ಅವರಿಗೆ ಇನ್ನೊಂದು ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ಹೆಚ್ಚು ಸೂಕ್ತವಾಗಿ ಹೇಳಲು ಆಗಬಹುದು. ಅವರಿಗೆ ಒಂದು ಭಾಷೆಯನ್ನು ಮಾತನಾಡುವಾಗ ಹೆಚ್ಚಿನ ಆತ್ಮವಿಶ್ವಾಸ ಇರಬಹುದು. ಅವರು ತಮ್ಮ ಸ್ವಂತ ಅಥವಾ ವೈಯುಕ್ತಿಕ ಸಂಭಾಷಣೆಗಳಿಗೆ ಈ ಭಾಷೆಯನ್ನು ಆರಿಸಿಕೊಳ್ಳಬಹುದು. ಹಲವೊಮ್ಮೆ ಒಂದು ಭಾಷೆಯಲ್ಲಿ ಒಂದು ನಿರ್ದಿಷ್ಟ ಪದ ಇಲ್ಲದೆ ಇರಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಭಾಷೆಯನ್ನು ಬದಲಾಯಿಸ ಬೇಕಾಗುತ್ತದೆ. ಅಥವಾ ತಾವು ಹೇಳುವುದು ಅರ್ಥವಾಗಬಾರದು ಎಂದಿದ್ದರೆ ಭಾಷೆ ಬದಲಾಯಿಸಬಹುದು. ಸಂಕೇತ ಬದಲಾವಣೆ ಆವಾಗ ಒಂದು ಗುಪ್ತಭಾಷೆಯಂತೆ ಕೆಲಸ ಮಾಡುತ್ತದೆ. ಹಿಂದಿನ ಕಾಲದಲ್ಲಿ ಭಾಷೆಗಳ ಬೆರಕೆಯನ್ನು ಟೀಕಿಸಲಾಗುತ್ತಿತ್ತು. ಮಾತನಾಡುವವನಿಗೆ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ ಎಂದು ಇತರರು ಭಾವಿಸುತ್ತಿದ್ದರು. ಈವಾಗ ಅದನ್ನು ಬೇರೆ ದೃಷ್ಟಿಯಿಂದ ನೋಡಲಾಗುತ್ತದೆ. ಸಂಕೇತ ಬದಲಾವಣೆಯನ್ನು ಒಂದು ಭಾಷಾ ಸಾಮರ್ಥ್ಯ ಎಂದು ಒಪ್ಪಿಕೊಳ್ಳಲಾಗುತ್ತದೆ. ಮಾತುಗಾರರನ್ನು ಸಂಕೇತ ಬದಲಾವಣೆ ಸಂದರ್ಭದಲ್ಲಿ ಗಮನಿಸುವುದು ಸ್ವಾರಸ್ಯವಾಗಿರಬಹುದು. ಏಕೆಂದರೆ ಮಾತನಾಡುವವರು ಆ ಸಮಯದಲ್ಲಿ ಕೇವಲ ಭಾಷೆಯೊಂದನ್ನೇ ಬದಲಾಯಿಸುವುದಿಲ್ಲ. ಅದರೊಡಲೆ ಸಂವಹನದ ಬೇರೆ ಧಾತುಗಳು ಪರಿವರ್ತನೆ ಹೊಂದುತ್ತವೆ. ಬಹಳ ಜನರು ಬೇರೆ ಭಾಷೆಯನ್ನು ವೇಗವಾಗಿ, ಜೋರಾಗಿ ಹಾಗೂ ಒತ್ತಿ ಮಾತನಾಡುತ್ತಾರೆ. ಅಥವಾ ಹಠಾತ್ತನೆ ಹೆಚ್ಚು ಹಾವಭಾವ ಮತ್ತು ಅನುಕರಣೆಗಳನ್ನು ಉಪಯೋಗಿಸುತ್ತಾರೆ. ಸಂಕೇತ ಬದಲಾವಣೆಯ ಜೊತೆ ಸ್ವಲ್ಪ ಸಂಸ್ಕೃತಿಯ ಬದಲಾವಣೆ ಸಹ ಇರುತ್ತದೆ.